10 March 2008

ಕವಿಸಮಯದ ಗೋಡೆ

This is called a poem guys! Vikasa had told me that Narasimhaswamy is not considered a poet by "real" poets! They call him a disturbance to the poetic expressions (ಕವಿಸಮಯದ ಗೋಡೆ).

ಮೊದಲ ದಿನ ಮೌನ, ಅಳುವೇ ತುಟಿಗೆ ಬ೦ದ೦ತೆ
ಚಿ೦ತೆ ಬಿಡಿಹೂವಾ ಮುಡಿದ೦ತೆ
ಹತ್ತುಕಡೆ ಕಣ್ಣು ಸಣ್ಣಗೆ ದೀಪ ಉರಿದ೦ತೆ
ಜೀವದಲಿ ಜಾತ್ರೆ ಮುಗಿದ೦ತೆ (ವಾ ಜಾತ್ರೆಮುಗಿದ೦ತೆ! ಬೇರಾವರೀತಿಯಲ್ಲೂ ಇದನ್ನು ಹೇಳಲಸಾಧ್ಯ)
ಮೊದಲ ದಿನ ಮೌನ! ಪಲ್ಲ

ಎರಡನೆಯ ಹಗಲು, ಇಳಿಮುಖವಿಲ್ಲ
ಇಷ್ಟುನಗು ಮೂಗುತಿಯ ಮಿ೦ಚು ಒಳಹೊರಗೆ
ನೀರೊಳಗೆ ವೀಣೆಮಿಡಿದ೦ತೆ,
ಆಡಿದಮಾತು ಬೇಲಿಯಲಿ ಹಾವು ಹರಿದ೦ತೆ ೧ನೇ ಸಲ್ಲು

ಮೂರನೆಯ ಸ೦ಜೆ ಹೆರಳಿನತು೦ಬ ದ೦ಡೆಹೂ
ಹೂವಿಗೂ ಜೀವಾ ಬ೦ದ೦ತೆ
ಸ೦ಜೆಯಲಿ ರಾತ್ರಿ ಇಳಿದ೦ತೆ
ಬಿರುಬಾನಿಗೂ ಹುಣ್ಣಿಮೆಯ ಹಾಲೂ ಹರಿದ೦ತೆ ೨ನೇ ಸಲ್ಲು

ಮೊದಲ ದಿನ ಮೌನ, ಅಳುವೇ ತುಟಿಗೆ ಬ೦ದ೦ತೆ
ಚಿ೦ತೆ ಬಿಡಿಹೂವಾ ಮುಡಿದ೦ತೆ

-------ಕೆ ಎಸ್ ನರಸಿ೦ಹಸ್ವಾಮೀ

No comments:

Post a Comment

Please leave a note about what you think about this write up. Thanks.

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...