02 May 2008

May 2007, Sky of the First Season, Seen from Areca Plantation, Talebailu

ಅಲ್ಲಿ, ಓ ದೂರದಲಿ, ಕಣ್ಬೆಳಕು ಸಾಗದಲಿ,
ಸಾರವೊ೦ದಿದೆಯ೦ತೆ ಅರಿವಿಲ್ಲ ನನಗೆ!

ಕಲ್ಲಿನಾ ಮೂರ್ತಿಯಲಿ, ತಲ್ಲೀನ ತಪಸಿಎದೆಯಲ್ಲೀ,
ಆತ್ಮಒ೦ದಿದೆಯ೦ತೆ, ಪರಮಾತ್ಮನ೦ತೆ!

ಬಾನಾಚೆ ನಾಡಿನಲಿ, ಭುವಿಯಡಿಯ ಗೂಡಿನಲಿ,
ದೇವರೋ ಕಾವರೋ, ಬರಿ ಸುಳ್ಳ ಕ೦ತೇ.

ಅರಳಿದಾ ಹೂವಿನಲಿ ಇಹ ಶುಭ್ರ ಶಾ೦ತಿಯದು,
ಮತ್ತೆ, ಮಲತಾಯ ಮಮತೆ ಮಡಿಲು, ದೈವತ್ವವಲ್ಲದಿರೆ ಮತ್ತೆ ಇನ್ನೇನು?

ದೇವನಿಹನೀಜಗದಿ, ನಾವು ತಿಳಿದ೦ತಲ್ಲ,
ಎಲ್ಲರಲಿ, ಎಲ್ಲಕಡೆ, ಒಳ್ಳೆತನದಲ್ಲಿ.

ಬೆ೦ಗಳೂರು
೨೦೦೧

There , where the eyes can not reach,
"Is there the almighty?", I am not aware!

In icons and in the hearts of sages,
"Is there a soul?", GOD to many!

Beyond the sky and beneath the ground,
Lies the lord, the protector: a bunch of lies.

The peace in blooming flowers,
And the care of a step-mother, are not they devine?

There is GOD, not the way we imagine,
Everywhere, in everyone, in goodness and gay.

Bengalooru
2001

No comments:

Post a Comment

Please leave a note about what you think about this write up. Thanks.

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...