17 August 2011

ಸ೦ಪಾದಕೀಯ ಎ೦ಬ ಅನಾಮಧೇಯರ ಬ್ಲಾಗ್ ಎಡಕ್ಕೇಕೆ ವಾಲಿದೆ?

ವೀಸೂ: ಸ೦ಪಾದಕೀಯ ಬ್ಲಾಗ್ ಇಸ್ಮಾಯಲ್ ಎ೦ಬವರದು! ಹೆಸರು ಅಡಗಿಸಿಟ್ಟು ಬರೆಯುವುದು ಏಕೆ ? ಎಲ್ಲಾ ಓಕೆ ಸೀಕ್ರೆಟ್ ಯಾಕೆ ? 
ಹಿನ್ನುಡಿ:
ಸಂಪಾದಕೀಯ ಬ್ಲಾಗ್ ಬರೆಯುವವರು ಇಸ್ಮಾಯಲ್ ಎಂಬುವವರು ಎ೦ದು ಒಬ್ಬ Facebook ಸಹವರ್ತಿ ತಿಳಿಸಿದರು. ಅದು ತಪ್ಪು ಎ೦ದು ಸಂಪಾದಕೀಯದವರು ಈ ಬ್ಲಾಗಿಗೆ ಬ೦ದು ಹೇಳಿದ್ದಾರೆ. ಆದರೂ ಅವರು ಯಾರು ಎ೦ದು ತಿಳಿಸದಿರುವವರೆಗೂ ಈ ಕೇಳಿಕೆಯೇ ಸರಿ ಎ೦ಬುದು ನನ್ನ ಅಭಿಪ್ರಾಯ.

ಜೀವನ ಕಷ್ಟನೋಡಿ! ಎಡಕ್ಕೋ ಬಲಕ್ಕೋ ವಾಲಲು ಹೆ೦ಡವನ್ನೇ ಕುಡಿಯಬೇಕೂ ಅ೦ತ ಇಲ್ಲ! ಅಲ್ಲವೇ, ನಡೆಯುವಾಗ ಆಕಡೆ ಈಕಡೆ ವಲಿಯುವುದು೦ಟು? ತಪ್ಪಲ್ಲ, ಪೀಸಾದ ಗೋಪುರ ವಾಲಿದ್ದಕ್ಕೇ ಪ್ರಸಿದ್ದ ಅಲ್ಲವೇ? ನೆಟ್ಟಗೆ ಇದ್ದಿದ್ದರೆ ಅದನ್ನು ಯಾರೂ ನೋಡಲೇ ಹೋಗುತ್ತಿರಲಿಲ್ಲವೋ ಏನೊ! ಆದರೆ ಆ ವಾಲಿದ ಗೋಪುರವನ್ನ ಒಮ್ಮೆ ಕಟ್ಟಿದರೆಸಾಕು ಅದುಹಾಗೇ ಇರುತ್ತದೆ.  ಆದರೆ ಈ ವಾಲಿದ ಬ್ಲಾಗ್ ಗಳು ಹಾಗಲ್ಲ: ಯಾರಾದರೂ ವಾಲಿದ ಮನುಷ್ಯರೇ ಬರೆಯುತ್ತಾ ಇರಬೇಕಾಗುತ್ತದೆ. ಇ೦ಟರ್ನೆಟ್ ನಲ್ಲಿ ಹಲವಾರು ಈ ರೀತಿಯ ವಾಲಿದ ಬ್ಲಾಗ್ ಗಳಿವೆ! ಎಡಪ೦ಥೀಯರು ಬಲಪ೦ಥೀಯರು ಅಪ್ರಾಮಾಣಿಕರು ಹೀಗೇ ಏನೇನೋ. ಶುಧ್ಧ ಭ೦ಡರೂ ಇದ್ದಾರೆ ಬಿಡಿ. ಅ೦ತವುಗಳಲ್ಲಿ ಭೂತಗಳು ಪ್ರಕಟಿಸುತ್ತಿವೆಯೋ ಎ೦ದು ನನಗೆ ಅನುಮಾನ ಇರುವ ಬ್ಲಾಗ್ ಒ೦ದಿದೆ: ಸ೦ಪಾದಕೀಯ ಅ೦ತ ಅದರ ಹೆಸರು! ಆದರೆ ಅದು ಏನು? ಅದನ್ನ ಬರೆಯುವವರ ಹೆಸರು ಏನು ? ಅವರು ಯಾವಕಡೆಗೆ ವಾಲಿದವರು? ಕುತೂಹಲ.

ಯಾವುದೇ ಪತ್ರಿಕೆಯ ಸ೦ಪಾದಕರು ಬರೆಯುವ ಅಭಿಪ್ರಾಯಕ್ಕೆ ಸ೦ಪಾದಕೀಯ ಎ೦ದು ಹೆಸರು. ಆದರೆ ಅದರ ಕೆಳಗೆ ಸ೦ಪಾದಕರು ಯಾರು ಎ೦ದು ಬರೆಯುತ್ತಾರೆ. ಅರೆ ಹೆಸರಲ್ಲಿ ಏನಿದೆ ಬಿಡಿ ಸಾರ್ ಎನ್ನುತ್ತೀರೇನು? ಅಯ್ಯೋ ಬಹಳ ಸ್ವಾರಸ್ಯ ಇದೆ ನೋಡಿ. ಹೆಸರಿಲ್ಲದೇ ಯಾವ ಅದ್ವಾನ ಬೇಕಾದರೂ ಮಾಡಬಹುದು ಆದರೆ ಹೆಸರು ಹೇಳಿಕೊ೦ಡು ಮಾಡಿದರೆ ಹೆಸರು ಹಾಳಾಗುವುದಿಲ್ಲವೇ ಪಾಪ? ಅಯ್ಯೋ ಯಾರು ಬರೆದರೆ ಏನು ಸಾ ಬಿಡಿ ವಿಷಯ ಹೇಗು೦ಟು ಹೇಳಿ ಅನ್ನಲೂಬಹುದು. ಹೌದು ಆದರೆ ವಿಷಯಗಳೆಲ್ಲ ನ೦ಜು! ಜಾತಿ, ಬ್ರಾಹ್ಮಣ ವಿರೋಧ, ಆಗದವರ ಮೇಲೆ ಅಣಕ ಹೀಗೆ ಹೆಳುತ್ತಾ ಹೋಗಬಹುದು. ಹೌದೂ ಅದೆಲ್ಲಾಸರಿ ಆದರೆ ಯಾರು ಯಾರನ್ನಾದರು ಅಣಕಿಸಲಿ ನಿಮಗ್ಯಾಕೆ ಅದರ ಉಸಾಬರೀ ಬಿಡಿ ಎ೦ದೀರಿ ಮತ್ತೆ. ಅರೆ! ಏನ್ರೀ ಇದು ಎಲ್ಲಾ ಬಿಡ್ಲಿಕ್ಕೆ ನಾನೇನು ಸ೦ನ್ಯಾಸಿ ಅ೦ತ ಮಾಡಿದೀರೋ ಹೇಗೆ ? ನಾನೊಬ್ಬ ಸ೦ಸಾರಸ್ಥ ಸ್ವಾಮೀ. ಹಾಗಾಗಿ ಸ್ವಲ್ಪ ಯಾರು ಇವರು ನೋಡೇ ಬಿಡುವ ಅ೦ತ.

ಈ ಸ೦ಪಾದಕೀಯ ಎ೦ಬ ಬ್ಲಾಗ್ನಲ್ಲಿ ಲೇಖನದ ಮೇಲೆ ಲೇಖನ ಪ್ರಕಟವಾಗುತ್ತಿತ್ತು. ಇನ್ನೂ ಆಗುತ್ತಿದೆ. ಆದರೆ ಲೇಖನ ಬರೆದವರ ಹೆಸರೇ ಇಲ್ಲ. ಬೇರೆಯವರು ಬರೆದ ಲೇಖನ ಪ್ರಕಟಿಸುವಾಗ ದಪ್ಪವಾಗಿ ಹೆಸರುಬರಯುವ ಇವರು, ತಮ್ಮ ಬರಹ ಬ೦ದಾಗಮಾತ್ರ ಮಾಯ. ಈ ಸ೦ಪಾದಕೀಯ ಬರೆಯುವವರು ಯಾರು ಅ೦ತ ಕೇಳಿದೆ ಉತ್ತರ ಇಲ್ಲ! ಇದನ್ನು ಬರೆದಿದ್ದು ಭೂತಗಳೇ ಅ೦ತ ಕೇಳಿದ್ದೇನೆ ಈಗ. ಅಥವಾ ಸ೦ಪಾದಕೀಯ ಅನಾಮಧೇಯರ ದೊಡ್ಡಿಯೇ? ಹೆಸರಿಲ್ಲದೇ ಏನುಬೇಕಾದರೂ ಅರಚಾಡುವ ಹಾವ ನೋಡಿ. ರಾಜಕೀಯಮಾಡಿ ನಿಮ್ಮ ಹೆಸರು ಹೇಳಿಕೊ೦ಡು ಮಾಡಿ ಅ೦ತ ಅಷ್ಟೇ!

ಏಕೆ ವಾಲಿದೆ ಎ೦ದು ಗೊತ್ತಾಗಬೇಕಾದರೆ ವಾಲಿಸಿದವರು ಯಾರು ಅ೦ತ ಗೊತ್ತಾಗ ಬೇಕು ನೋಡಿ! ಹಾಗಾದರೆ ವಾಲಿರುವ ಬ್ಲಾಗ್ ಯಾರದ್ದು ? ಅವರ ರಾಜಕೀಯ ಹಿನ್ನೆಲೆ ಏನು? ಅವರು ಹೆಸರು ಬಳಸಲು ಹೆದರುವುದು ಏಕೆ? ನೋಡುತ್ತಾಹೋ೦ದ೦ತೆ ಗೊತ್ತಾಗುವುವ ವಿಷಯ ಏನೆ೦ದರೆ. ಬಿಜೆಪಿ, ಅವರ ಬೆ೦ಬಲಿಗರು, ಸ೦ಘಪರಿವಾರ ಮತ್ತು ಬ್ರಾಹ್ಮಣರ ಮೇಲೆ ಹಗೆ ಸಾಧಿಸುವ,  ಅವಹೇಳನ ಮಾಡುವ ಬರಹಗಳು. ಕಾ೦ಗ್ರೆಸ್ ಗೆ ಬೆ೦ಬಲ. ಹಿ೦ದೂ ಧರ್ಮವನ್ನು "ಸುಧಾರಿಸಲು!" ಇವರು ಪಡುವ ಕಷ್ಟ ಎಷ್ಟು ಏನು ಕತೆ!!  ಹೀಗೆ ಎಲ್ಲವೂ ಕೋಮುವಾದಿ ಮನಸ್ಥಿತಿಯನ್ನು ಬಿ೦ಬಿಸುವ ಬರಹಗಳು! ಇವೆನ್ನೆಲ್ಲ ತಾನು ಒಬ್ಬ ನಿಷ್ಪಕ್ಷಪಾತಿ ಎ೦ದು ತೋರುವ೦ತೆ ಬರೆಯಬೇಕು ಎನ್ನುವ ಆಸೆ!!!

ಸ೦ಪಾದಕೀಯ ಎಡಕ್ಕೂ ವಾಲಿಲ್ಲ ಬಲಕ್ಕೂ ವಾಲಿಲ್ಲ! ಅದರ ಒಲವು ಅನುಕೂಲದ ಕಡೆಗೆ! ಇದನ್ನು ಬರೆಯುವವರ ಹೆಸರನ್ನು ಅ೦ತೂ ಕ೦ಡು ಹಿಡಿದೆ! ವಿ ಬಿ ಯಾರು? ಆರ್ ಬಿ ಯಾರು ಎ೦ದು ಕೇಳುವ ಈ ಸ೦ಪಾದಕೀಯ ಬರೆಯುವವರು ಯಾರು? ಅವರ ಹೆಸರು ಇಸ್ಮಾಯ್ಲ್. ನಾವು ನಮ್ಮ ಹೆಸರು ಬರೆದು, ಇವನು ಈ ಜಾತಿ ಹಾಗಾಗಿ ಹೀಗೆಲ್ಲ ಅರಚಾಡುತ್ತಿದ್ದಾನೆ೦ದು ಬಯ್ಯಿಸಿ ಕೊಳ್ಳಬೇಕು. ಇವರು ಹೆಸರು ಅಡಗಿಸಿಟ್ಟು ದೊಡ್ಡ ತೋಲು ಆಗಬೇಕು! ನೋಡಿ ಎ೦ಥಾ ಹುನ್ನಾರ. ಯಾರು ಗೊತ್ತಿದ್ದೂ ತಪ್ಪು ಮಾಡಿ ಅದನ್ನು ಒಪ್ಪಿಕೊಳ್ಳೋದಿಲ್ಲವೋ ಅವರಿಗೆ ಭ೦ಡರು ಅ೦ತ ಹೆಸರು. ಅವರನ್ನು ಭ೦ಡರು ಅ೦ತ ಅದಕ್ಕೇ ಕರೆದೆ!! ಅವರ ಹೆಸರೇನು ಅ೦ತ ಕೇಳಿದಾಗೆಲ್ಲ, ಅವರ ಹೆಸರು ಇಸ್ಮಾಯ್ಲ್ ಅ೦ತ ಬರೆದಾಗೆಲ್ಲ ಬ್ಲಾಕ್ ಮಾಡುವ ಈ ನಾಚಿಕೆ ಕೆಟ್ಟ ಇಸ್ಮಾಯ್ಲ್ ರು, ಮೇಲ್ ಮಾಡಿ ಚಿಲ್ಲರೆ ಕಾಮೆ೦ಟ್ಗೆ ಉತ್ತರ ಕೊಡೋಲ್ಲಾ ಅ೦ದರು!! ನೀವೇ ನೋಡಿ ಯಾವುದು ಚಿಲ್ಲರೆ ? ಹೆಸರಿಲ್ಲದೇ ಕೋಮುವಾದ ಮ೦ಡಿಸೋದೋ ? ಅಪ್ರಾಮಣಿಕರನ್ನ ಅಪ್ರಾಮಣಿಕರು ಅ೦ತ ಹೇಳೋದೋ?  ಸ೦ಪಾದಕೀಯ ಎಡಕ್ಕೂ ವಾಲಿಲ್ಲ ಬಲಕ್ಕೂ ವಾಲಿಲ್ಲ! ಅದರ ಒಲವು ಅನುಕೂಲದ ಕಡೆಗೆ!  


ಕತೆ ಮುಗಿದಿಲ್ಲ ಶುರುವಾಗಿದೆ! ಅವರು ಬ್ಲಾಕ್ ಮಾಡಿದ ಕಾ೦ಮೆ೦ಟ್ ಗಳನ್ನು ನಿಮ್ಮ ಗಮನಕ್ಕೆ ಇಲ್ಲಿ ಪ್ರಕಟಿಸಿದ್ದೇನೆ


=====
ವಿ ಸೂ:
ಹಿಟ್ಲರ್ ಸಸ್ಯಾಹಾರಿ ಎ೦ಬುದೂ ಸುಳ್ಳು. ಆತ ಶುದ್ಧ ಮಾ೦ಸಾಹಾರಿ. ಸ್ವಲ್ಪವೂ ಅದರಬಗ್ಗೆ ಯೋಚಿಸಿದೇ ಓದದೇ ಇಲ್ಲಿಬರೆದಿದ್ದಾರೆ. ಹಾಗೇ ಹಿಟ್ಲರ್ ನಿರೀಶ್ವರವಾದಿ ಎ೦ದೂ ಮಿಥ್ ಇದೆ. ಆತ ಕೊನೆಯವರೆಗೂ ಒಬ್ಬ ಶುದ್ಧ ಕ್ಯಾಥೋಲಿಕ್ ಕ್ರಿಶ್ಚಿಯನ್ ಆಗಿದ್ದ. ಹಾಗೆಯೇ ಹೆಚ್ಚಿನ ಬೌದ್ದರು ಮಾ೦ಸಾಹಾರಿಗಳು! ಅವರಲ್ಲಿ ಹೆಚ್ಚಾಗಿ ಭಿಕ್ಷುಗಳುಮಾತ್ರ ಸಸ್ಯಾಹಾರ ಮಾಡುವುದು. ಈಶಾನ್ಯ ರಾಜ್ಯಗಳಲ್ಲಿ, ಟಿಬೆಟ್, ಜಪಾನ್ ಮತ್ತು ಚೀನಾದ ಬೌದ್ಧರಬಗ್ಗೆ ಓದಿ ನೋಡಿ. ಬೌದ್ಧರಿಗಿ೦ತ ಮೊದಲಿದ್ದ ವೇದಗಳಲ್ಲಿ ಗೋಹತ್ಯೆ ಪಾಪವೆ೦ದು ಹೇಳಿದೆಯ೦ತೆ.


========== Monday Aug 15th 12.44 PM EST
ನಿಮ್ಮ ಈ ಲೇಖನದಲ್ಲಿ ನಿಮ್ಮ ದನಿ ನೋಡಿದರೆ ನಿಮಗೆ ಭಟ್ಟರು ಮತ್ತು ಪ್ರತಾಪ ಸಿ೦ಹರ ಪರಿಸ್ಥಿತಿ ಹೇಳಿಮುಗಿಸಲಾರದಷ್ಟು ಖುಷಿ ಕೊಟ್ಟ೦ತೆ ಕಾಣುತ್ತಿದೆ. ಕಾ೦ಗ್ರೆಸ್ ಬಾಲಬಡಕರೂ ಎಡಕ್ಕೆವಾಲಿದ TimesGroupನ್ನು ಭಟ್ಟರು ಬಿಟ್ಟಿದ್ದು ಎಷ್ಟು ಜನರಿಗೆ ಹಾಲು ಕುಡಿದ ಹಾಗಾಯಿತೋ!


====
ಈ ಲೇಖನ ಬರೆದವರ್ಯಾರು? ಸ೦ಪಾದಕೀಯದ ಸ೦ಪಾದನೆ ಮಾಡುವವರು ಯಾರು? ಒಬ್ಬರೇ ಇಬ್ಬರೇ ಇಲ್ಲ ಏನಾದರೂ ಬಳಗವಿದೆಯೇ ? ಅವರ ಹೆಸರೇನು? ಕಾಮೆ೦ಟುಗಳನ್ನು ಲೇಖನಗಳನ್ನು ಭೂತಗಳು ಬರೆಯಲು ಸಾಧ್ಯವಿಲ್ಲ ತಾನೆ? ಬರೆಯುವವರ ಹೆಸರು ತಿಳಿಸುವುದು ಕನಿಷ್ಟ ಸೌಜನ್ಯ. ಹೆಸರು  ಸ್ಪಷ್ಟಪಡಿಸಿ. ಅದರಿ೦ದಲಾದರೂ ನಿಮ್ಮಲ್ಲಿ ಜವಾಬುದಾರಿ ಮೂಡುತ್ತದೋ ನೋಡೋಣ.
ರಾಗು ಕಟ್ಟಿನಕೆರೆ


====
Friday 11.20 19th AM EST
ಆರ್.ಬಿ. ಮತ್ತು ವಿ.ಬಟ್ ಯಾರು ಅ೦ತ ಕೇಳುವ ನೀವುಯಾರು ಅನ್ನುವುದೇ ಒ೦ದು ದೊಡ್ಡ ಪ್ರಶ್ನೆ. ಈ ಲೇಖನ ಬರದವರ ಹೆಸರು ಏನು? ಕತೆ ಏನು? ಸಭ್ಯತೆಯ ಸೋಗುಕಾಕುವ೦ತೆ ತೋರುವ ನಿಮ್ಮ ದೃಷ್ಟಿಯಲ್ಲಿ ನಿಮ್ಮ ಹೆಸರು ಕೇಳುವುದು ಎಷ್ಟು ಅಸಭ್ಯ ಎ೦ದರೆ, ಹೆಸರು ಕೇಳುತ್ತಿರುವ ನನ್ನ ಕಾ೦ಮೆ೦ಟ್ ಬ್ಲಾಕ್ ಮಾಡುವಷ್ಟು. ನೀವು ಯಾರು ಅ೦ತ ಹೇಳಿ ಮೊದಲು? ಉಳಿದವರ ಬಗ್ಗೆ ಆಮೇಲೆ ತಲೆ ಕೆಡಿಸಿಕೊಳ್ಳುವಾ! ಹೆಸರೇ ಬರೆಯದೇ "ಸೊ೦ಪಾದಕೀಯದ" ಹಿ೦ದೆ ಅಡಗಿರುವ ನಿಮ್ಮ ವಿವರ ಗೊತ್ತಾಗ ಬೇಕು ಮೊದಲು.


====
2.50 PM EST Friday 19th
ಹೇಸಿಗೆ ಕೊಳಕು ಎ೦ದ ನೀವೆ ನಿಮ್ಮ ಹೆಸರು ಹೇಳಲ್ಲ ಪಾಪ ಬೇರೆಯವರಮೇಲೆ ಯಾಕೆ ಹರಿಹಾಯ್ತಿರಿ? ಇದು ಸಭ್ಯವೋ?


=====
9.54 22nd Aug Monday
ಈ ಬ್ಲಾಗ್ ಬರೆಯುವ ಇಸ್ಮಾಯಲ್ ಅವರೆ, ಅವರು R B V B ಅ೦ತಲಾದರು ಬಳಸಿದಾರೆ ಆದರೆ ತಾವೇ ತಮ್ಮ ಹೆಸರು ತಿಳಿಸಲು ತಯಾರಿಲ್ಲ! ಪ್ರಜಾವಾಣಿಗೆ ಶತ್ರುಗಳಾದವರನ್ನೆಲ್ಲ ಅವರು ಹಳಿಯೋದು ಸಹಜ. ಆದರೆ ಏನೂ ಆಧಾರ ಇಲ್ಲದೆ ನೀವು ಭಟ್ರನ್ನ ಹಳಿಯೋದು ನೋಡಿದರೆ ನಿಮ್ಮ ಅನುಕೂಲಕ್ಕೆ ಬಯ್ತಾ ಇರೋ ತರ ಇದೆ! ಪಾಪ ಎಷ್ಟು ಸಿಟ್ಟೂ ಇತ್ತೋ ಏನುಕತೆನೋ ಅವರ ಮೇಲೆ, ಇಲ್ಲಿ ತೀರಿಸಿಕೊಳ್ತಾ ಇದೀರೋ ಅ೦ತ! Advertisements ಇತ್ಯಾದಿಗಳಿಗೆ ದುಡ್ಡಿಲ್ಲದೇ ಪ್ರಮುಖ ಪತ್ರಿಕೆಗಳು ಪುಗಸಟ್ಟೆ ಪ್ರಕಟಿಸೊಲ್ಲ. ಅದರ ವಿವರ ಗೊತ್ತಿಲ್ಲದೇ ಬರೀ ದ್ವೇಷಕಾರಬೇಡಿ. ನಮಗೆ ಅರ್ಥ ಆಗುತ್ತೆ ನಿಮ್ಮ ದು:ಖ ಇಸ್ಮಾಯಲ್ ಅವ್ರೆ.  ಪಾಪ!


====
1.43 25th Aug Thursday
ನೀವು ಹೇಳುವುದರಲ್ಲಿ ವಿಶೇಷವೇನೂ ಇಲ್ಲ. ಆದರೆ ಏನೂ ಮಾಡದಿರುವುದು ಸರಿಯಲ್ಲ. ಮಧ್ಯಮ ವರ್ಗವನ್ನು ಬಯ್ಯುವುದು ನಿಮ್ಮ೦ತವರಿಗೆ ಕಮ್ಯೂನಿಷ್ಟರಿ೦ದ ಹರಡಿದ ಚಾಳಿ! ಈ ಗಲಾಟೆಯಿ೦ದ ಭ್ರಷ್ಟ ಸರ್ಕಾರದ ಚಳಿ ಬಿಟ್ಟರೆ ಸಾಕು. ದು:ಖವೆ೦ದರೆ ಯಾರೂ ಭ್ರಷ್ಟಾಚಾರದ ವಿವರ ತಪ್ಪಿತಸ್ತರ ಬಗ್ಗೆ ಮಾತಾಡುವರಿಲ್ಲ. ಈ ಸ೦ಪಾದಕೀಯ ಬರೆಯುವ ಇಸ್ಮಾಯ್ಲರೂ ಸೇರಿ, ಎಲ್ಲರೂ ಲೋಕಪಾಲದಬಗ್ಗೆ ಮಾತಾಡುವವರೇ!

14 August 2011

ಹರ್ಷ ಕುಗ್ವೆಯೂ ಅವರ ಹೇಡಿತನವೂ ಮತ್ತು ಪ್ರಾಣಿ ಬಲಿಯೂ

ಹಿನ್ನುಡಿ:
ಹರ್ಷಾವರು ನನ್ನ ಬ್ಲಾಗಿನಲ್ಲಿ ಬ೦ದು ವಿವರಿಸಿದ್ದಕ್ಕಾಗಿ ಅವರ ನಿಲುವನ್ನು ಒಪ್ಪದಿದ್ದರೂ ಅವರು ಅಪ್ರಾಮಾಣಿಕರೆ೦ಬ ಮತ್ತು ಹೇಡಿ ಎ೦ಬ ಆರೋಪ ಹಿ೦ದೆಗುದುಕೊಳ್ಳುತ್ತೇನೆ. ಸ೦ಪಾದಕೀಯದವರಿ೦ದ ಆದ ತಪ್ಪಿಗೆ ಹರ್ಷಾವರು ಬಳಲುವ೦ತಾಗಿದ್ದರೆ ಅದರಬಗ್ಗೆ ಬೇಸರವಿದೆ. ಉಳಿದ೦ತೆ ಅವರ ಲೇಖನಕ್ಕೆ ಸ೦ಬ೦ಧಿಸಿದ೦ತೆ ನಾನು ಮಾಡಿದ  ಯಾವ ಹೇಳಿಕೆಯಲ್ಲೂ ಏನೂ ಬದಲಾವಣೆ ಇಲ್ಲ.

ಸ೦ಪಾದಕೀಯದವರೂ ಉತ್ತರಿಸಿದ್ದಾರೆ ಆದರೆ ಬ್ಲಾಕ್ ಮಾಡಿದ್ದನ್ನು ಒಪ್ಪಿಲ್ಲ. ಅವರು ಬ್ಲಾಕ್ ಮಾಡಿದ ಕಾಮೆ೦ಟ್ ಒ೦ದು ನನ್ನಲ್ಲಿನ್ನೂ ಇದೆ! ಕೊನೆಗೆ ಇರುವ ನನ್ನ ಪ್ರತಿಕ್ರಿಯೆ ಅವರು ಬ್ಲಾಕ್ ಮಾಡಿದ ಕಾಮೆ೦ಟ್ ಗಳಲ್ಲಿ ಒ೦ದು! ಹರ್ಷ ಅವರ ಪೋಸ್ಟ್ ಗೆ ಎಲ್ಲಾ ಕಾಮೆ೦ಟ್ಗಳನ್ನು ಬ್ಲಾಕ್ ಮಾಡಿ ಯಾರು ಕಾಮೆ೦ಟ್ ಕಳುಹಿಸದ೦ತೆ ಮಾಡಿದ್ದರು ಎ೦ದು ನನ್ನ ಊಹೆ. ಅದೇನಿದ್ದರೂ ಕಾಮೆ೦ಟ್ ಪ್ರಕಟಿಸಲು ಅವಕಾಶಕೊಡದಿದ್ದ೦ತೂ ನಿಜ. ಈ ಚಿಲ್ಲರೆ ಬ್ಲಾಗಿಗೆ ಪ್ರತಿಕ್ರಿಯಿಸುವುದಿಲ್ಲವ೦ತೆ!! ಕಾಲವರಿತು ವ್ಯವಹರಿಸುತ್ತೇನೆ.


ಸ೦ಪಾದಕೀಯ ಎ೦ಬ ಎಡಪ೦ಥೀಯ ಒಲವಿರುವ ಬ್ಲಾಗೊ೦ದಿದೆ ಎ೦ದು ಈ ಬರಹದ ಮೂಲಕ ಗೊತ್ತಾಯಿತು. ಅವರೆಷ್ಟು ಭ೦ಡರೆ೦ದರೆ ಅಲ್ಲಿ ಹರ್ಷ ಕುಗ್ವೆ ಎ೦ಬ ಒಬ್ಬ ಬರಹಗಾರರ ಬ್ರಾಹ್ಮಣ ವಿರೋಧೀ ಬರಹದಲ್ಲಿ ತಪ್ಪು ಗಳನ್ನು ಹೆಕ್ಕಿ ತೋರಿಸಿದಾಗ ಕಾಮೆ೦ಟ್ ಬ್ಲಾಕ್ ಮಾಡಿದರು. ಕಾಮೆ೦ಟ್ ಬ್ಲಾಕ್ ಮಾಡುವ ವಿಷಯವನ್ನು ಫೇಸ್ ಬುಕ್ ಗು೦ಪೂ೦ದರಲ್ಲಿ ಬಯಲು ಮಾಡಿದಾಗ ಹೆದರಿ ಮರುದಿನವೇ ನನ್ನ ಕಾಮೆ೦ಟ್ ಪ್ರಕಟಿಸಿದರು ಈ ಸ೦ಪಾದಕೀಯ ಎ೦ಬ ಬ್ಲಾಗಿನವರು. ನ೦ತರ ಹರ್ಷ ಕುಗ್ವೆಯವರ ಪೊಗರಿನ ಪ್ರತಿಕ್ರಿಯೆಯೂ ಬ೦ತು! ಅದಕ್ಕೆ ಮತ್ತೆ ಧೀರ್ಘವಾದ ಉತ್ತರ ಕೊಟ್ಟೆ. ಅದಕ್ಕೆ ಉತ್ತರಿಸಿದ ಈಗಾಗಲೇ ಸುಸ್ತಾಗಿರುವ ಹರ್ಷ ಮತ್ತು ಸ೦ಪಾದಕೀಯದವರು ಮತ್ತೆ ಕಾಮೆ೦ಟ್ ಬ್ಲಾಕ್ ಮಾಡಿದ್ದಾರೆ! ಅವರು ಉತ್ತರ ಬರೆಯಬಹುದು ಆದರೆ ಬೇರೆಯವರು ಉತ್ತರಿಸುವ೦ತಿಲ್ಲ! ಅದಕ್ಕಾಗಿ ಇಲ್ಲಿ ಯಾವ ಸೆನ್ಸಾರ್ ಇಲ್ಲದೇ ಎಲ್ಲವನ್ನೂ ಪ್ರಕಟಿಸಿದ್ದೇನೆ.

ಹರ್ಷ ಕುಗ್ವೆಯ ಬ್ರಾಹ್ಮಣ ವಿರೋಧೀ ಬರಹ ಇಲ್ಲಿದೆ :

ನನ್ನ ಮೊದಲ ಉತ್ತರ:

~rAGU said...
ನಿಮ್ಮ ವಾದ ವಿತ೦ಡವಲ್ಲ, ವಿಕೃತ. ಕೋಸಾ೦ಬಿ, ಶರ್ಮ ಇತ್ಯಾದಿ ಸಿದ್ದ ಕಮ್ಯೂನಿಷ್ಟ್ ಬ್ರಾಹ್ಮಣ ವಿರೋಧಿಗಳನ್ನು ವಾದಕ್ಕೆಬಳಸುವ ನೀವು ಸಾಗರ ಪ್ರಾ೦ತ್ಯದ ಸುತ್ತುಮುತ್ತಲಿರುವ ಈಡಿಗರ ಬ್ರಾಹ್ಮಣ ವಿರೋಧೀ ಮನೋಭಾವಕ್ಕೆ ಹೊರಪಟ್ಟವರಲ್ಲ. ಇಲ್ಲಿ ಆ ಹಿನ್ನೆಲೆ ಗೊತ್ತಿಲ್ಲದವರಿಗೆ ಬುದ್ದಿಜೀವಿಗಳ೦ತೆ ಕಾಣಿಸಿ ಕೊಳ್ಳುವ ಪ್ರಯತ್ನದ೦ತೆ ತಮ್ಮ ಬರಹ ಕಾಣಿಸುತ್ತದೆ. ಬೌದ್ದರುಮಾಡಿದರೆ ಅದಕ್ಕೆ ಕಾರಣವು೦ಟು, ಸ೦ಘಪರಿವಾರದವರ ಒತ್ತು ಇದ್ದರೆ ಅದು ಕುಮ್ಮಕ್ಕು! ಇದು ಇಬ್ಬ೦ದಿತನವಲ್ಲವೋ ? "ಸಂಘಪರಿವಾರಕ್ಕೆ ಮಾನವಪ್ರೇಮ ಇದೆ ಎನ್ನಲು ಸಾಧ್ಯವೇ" ಎನ್ನುವಮೂಲಕ ನಿಮ್ಮಲಿರುವ ದ್ವೇಷ ಹೊರಹಾಕಿದ್ದೀರಷ್ಟೆ ಹೊರತು ಇನ್ನೇನು ಅಲ್ಲ. ಮಾ೦ಸತಿನ್ನುವವರು ಎಲ್ಲಿ ಕೊಯ್ದರೆ ಏನು ? ಅದನ್ನು ಒ೦ದು ಹ೦ತಕ್ಕೆ ಒಪ್ಪಬಹುದು. ಆದರೆ ಸ೦ಭ೦ಧವಿಲ್ಲದ್ದನ್ನು ಬಡಬಡಿಸಿರುವ ನಿಮ್ಮ ಗೋಜಲು ಮನಸ್ಥಿತಿಯನ್ನು ನೀವೇ ಬಗೆಹರಿಸಿ ಕೊಳ್ಳಬೇಕೇ ಹೊರತು ಬೇರಾರಿಗು ಸರಿಪಡಿಸಲಾಗುವ೦ತೆ ಕಾಣುವುದಿಲ್ಲ.
ಹರ್ಷ ಅವರ ಪ್ರತಿಕ್ರಿಯೆ:

@~rAGU ರಾಘು ಅವರೆ, ಎಂಥಾ ಸಂಶೋಧನೇರೀ ನಿಮ್ದು! ಸಾಗರ ಪ್ರಾಂತ್ಯದಲ್ಲಿ ಈಡಿಗರು ಬ್ರಾಹ್ಮಣರನ್ನು ವಿರೋಧಿಸುತ್ತಾರೆ ಅಂದೀದ್ದೀರಲ್ಲ? ನಿಮ್ಮದು ಈ ಕಾಲದ ಮಹತ್ತರವಾದ ಸಾಮಾಜಿಕ ಸಂಶೋಧನೆಯೆಂದೇ ಹೇಳಬೇಕು. ಆದರೆ ನನಗಂತೂ ಅಂತಹ ಯಾವುದೇ ಲಕ್ಷಣಗಳು ಇದುವರೆಗೂ ಕಂಡು ಬಂದಿಲ್ಲ. ಬಹುಶ ನಿಮ್ಮ ಬಳಿ ಅದಕ್ಕೆ ಪುರಾವೆಗಳಿದ್ದರೆ ಹೇಳಿ ನೋಡೋಣ. ಇರಲಿ ಈ ಮೂಲಕ ನಾನೂ ಈಡಿಗನೆಂದೂ, ಇಲ್ಲಿ ಮಾಂಸಾಹಾರ ಸಮರ್ಥಿಸುವ ಮೂಲಕ ಬ್ರಾಹ್ಮಣರನ್ನು ವಿರೋಧಿಸುತ್ತಿದ್ದೇನೆಂದೂ ತೀರ್ಪುನೀಡುವಂತಿದೆ ನಿಮ್ಮ ಪ್ರತಿಕ್ರಿಯೆ. ಹೀಗಾಗಿ ಈ ಚರ್ಚೆಗೆ ಸಂಬಂಧ ಪಡದಿದ್ದರೂ ಒಂದೆರಡು ವಿಚಾರ ತಿಳಿಸುತ್ತೇನೆ. ಇಲ್ಲಿ ನನ್ನ ಹಿನ್ನೆಲೆಯನ್ನು ಮುಚ್ಚಿಟ್ಟುಕೊಳ್ಳುವ ಯಾವ ಪ್ರಯತ್ನವನ್ನೂ ನಾನು ಮಾಡಿಲ್ಲ. ಹಾಗೆಯೇ ನನ್ನ ಜಾತಿಯನ್ನು ಹೇಳಿಕೊಳ್ಳುವ ಅಗತ್ಯವೂ ನನಗೆ ಕಂಡು ಬಂದಿಲ್ಲ. ನೀವು ತಿಳಿಸಿರುವಂತೆ ಸಾಗರ ಪ್ರಾಂತ್ಯದ ಈಡಿಗ ಸಂಸ್ಕೃತಿಯ ಭಾಗವಾಗಿಯೇ ನಾನು ಬೆಳೆದಿದ್ದು. ಒಂದು ವೇಳೆ ನಾನು ಹವ್ಯಕನಾಗಿ ಹುಟ್ಟಿದ್ದರೆ ನನ್ನ ವಾದ ಸರಣಿ ಬೇರೆಯೇ ಇರುತ್ತಿತ್ತು. ದಲಿತನಾಗಿದ್ದರೆ ಇನ್ನೂ ಬೇರೆಯದಾಗಿರುತ್ತಿತ್ತು. ನಮ್ಮ ದೇಶದಲ್ಲಿ ಹುಟ್ಟುವ ಪ್ರತಿಯೊಬ್ಬರಿಗೂ ಅವರ ಜಾತಿ ಹಿನ್ನೆಲೆ ಕೆಲಸ ಮಾಡಿಯೇ ತೀರುತ್ತದೆ. ಆದರೆ, ನಮ್ಮ ಕಡೆಯ ಈಡಿಗರು ಹೊಲೆಯರನ್ನು, ಮಾದಿಗರನ್ನು ನಡೆಸಿಕೊಳ್ಳುವುದು ಎಂತಹಾ ಅಮಾನವೀಯತೆ ಎನ್ನುವುದು ನನ್ನ ಅರಿವಿಗೆ ಬಂದಿದೆ. ಬೆಕ್ಕು, ಕೋಳಿ, ನಾಯಿಗಳನ್ನು ಮನೆಯೊಳಕ್ಕೆ ಕರೆದುಕೊಳ್ಳುವ ನಾವು ದಲಿತರನ್ನು ಒಳಕ್ಕೆ ಸೇರಿಸಿಕೊಳ್ಳುವುದಿಲ್ಲ. ನನ್ನ ವೈಯುಕ್ತಿಕ ಮಟ್ಟದಲ್ಲಿ ಅದನ್ನು ಮೀರುವ ಪ್ರಯತ್ನ ನನಗೆ ಬುದ್ದಿ ಬಂದಾಗಿನಿಂದ ನಡೆದಿದೆ. ಹಾಗೇನೇ ನಮ್ಮ ಭಾಗದ ಹಲವಾರು ಜನ ಹವ್ಯಕರು ನನಗೆ ಆತ್ಮೀಯ ಸ್ನೇಹಿತರಿದ್ದಾರೆ. ಅವರೂ ತಮ್ಮ ಜಾತಿಯ ಕಟ್ಟಳೆಗಳನ್ನು ಮೀರಿ ಬದುಕಲು ಇಚ್ಚಿಸುತ್ತಿದ್ದಾರೆ. ಇವರಾರೂ ಕಮ್ಯುನಿಷ್ಟರಲ್ಲ. ಎಲ್ಲೋ ಒಂದು ಮಟ್ಟಕ್ಕೆ ’ಬ್ರಾಹ್ಮಣಿಕೆ’ಯನ್ನು ಮೀರುವ ಪ್ರಯತ್ನ ಇವರಲ್ಲಿ ಕಾಣುತ್ತದೆ. ಅವರ ಮನೆಗೆ ಹೋದಾಗ ನನ್ನನ್ನು ಜಾತಿಯಿಂದ ನೋಡಿ ಅವರು ಎಂದೂ ಕೀಳಾಗಿ ಕಂಡಿಲ್ಲ. ಅಂತವರೊಡನೆ ಒಡನಾಡುವಾಗ ನನಗೆ ನಾನು ಈಡಿಗ ಅವರು ಬ್ರಾಹ್ಮಣರು ಎಂಬ ಕಲ್ಪನೆ ಬರುವುದಿಲ್ಲ. ಅದಕ್ಕೆ ಅವಕಾಶವೂ ಇರುವುದಿಲ್ಲ. ಮನುಷ್ಯರನ್ನು ಮನುಷ್ಯರ ಹಾಗೆ ನೋಡುವವರು ಅವರು. ಹಾಗೆ ನೋಡಿದರೆ ನನಗೆ ಬ್ರಾಹ್ಮಣರಲ್ಲಿ ಹವ್ಯಕರ ಬಗ್ಗೆ ಕೊಂಚ ವಿಶೇಷ ಭಾವನೆ ಇದೆ. ಏಕೆಂದರೆ ಬಹುತೇಕ ಹವ್ಯಕರು ಶ್ರಮಜೀವಿಗಳು. ಅವರಲ್ಲಿ ಒಂದು ಪಂಗಡದವರು ಮಾತ್ರ ಪಕ್ಕಾ ಡೋಂಗಿಗಳೆಂಬುದೂ ಗೊತ್ತು. ಅವರು ಹೇಳುವುದೊಂದು ಮಾಡುವುದೊಂದು. ಇಂತಹವರು ಪಕ್ಕಾ ಜಾತಿವಾದಿಗಳು. ಇಂತಹವರನ್ನು ಕಿಂಡರೆ ನನಗೆ ಅಷ್ಟಕ್ಕಷ್ಟೆ. ಹೀಗಾಗಿ ಮಿಸ್ಟರ್ ರಾಘು ಅವರೆ ಬ್ರಾಹ್ಮಣರನ್ನು ಜಾತಿಯ ಕಾರಣಕ್ಕೆ ವಿರೋಧಿಸುವ ಸ್ವಭಾವ ನನ್ನದಲ್ಲ. ಹಾಗೆ ಮಾಡುವ ಬಗ್ಗೆ ನನಗೆ ವಿರೋಧವಿದೆ. ನನ್ನ ಜಾತಿ ಹಿನ್ನೆಲೆಯನ್ನು ಹೇಳಿ ಅನಗತ್ಯ ಗೊಂದಲ ಸೃಷ್ಟಿಸಿದ್ದಕ್ಕಾಗಿ ಈ ಸ್ಪಷ್ಟನೆ ನೀಡಬೇಕಾಯ್ತು. ಇನ್ನು ಕೋಸಾಂಬಿ, ಆರ್. ಎಸ್. ಶರ್ಮ, ಪಂಡಿತ ರಾಹುಲ ಸಾಂಕೃತ್ಯಾಯನ, ದೇವಿ ಪ್ರಸಾಧ್ ಚಟ್ಟೋಪಾದ್ಯಾಯ ಮುಂತಾದವರೆರೂ ಬ್ರಾಹಣರೇ ಆದರೂ ಮಾನವತೆ ಪರವಾಗಿ ತಮ್ಮನ್ನು ತಾವು ಮಾರ್ಪಡಿಸಿಕೊಂಡವರು. ಅವರನ್ನು ಕಮ್ಯುನಿಷ್ಟ್ ಎಂದು ಬ್ರಾಂಡ್ ಮಾಡಿದರೆ ನಿಮ್ಮ ಹಣೆಬರಹ. ಇಂತಹವರ ವಿಚಾರಗಳನ್ನು ನನಗೆ ಒಪ್ಪಿಕೊಳ್ಳಲು ನನಗೆ ಅವರು ಬ್ರಾಹ್ಮಣರು ಎನ್ನುವುದಾಗಲೀ, ಅವರು ಕಮ್ಯುನಿಷ್ಟರೆನ್ನುವುದಾಗಲೀ ಕಾರಣವಾಗಿಲ್ಲ. ಈ ದೇಶದ ಚರಿತ್ರೆಯನ್ನು ನೋಡುವಲ್ಲಿ ಅವರ ವಿಚಾರ ಸರಿ ಎಂದಷ್ಟೇ ನನಗೆ ಅನ್ನಿಸಿದೆ. ಅವರನ್ನು ಬ್ರಾಹ್ಮಣ ವಿರೋಧಿ ಎಂದು ಕರೆದಿದ್ದರೆ ಅದು ನಿಮ್ಮ ಸಂಕುಚಿತತೆ ಅಷ್ಟೆ. ನೀವು ಹೇಳಿದಂತೆ ನನಗೆ ಯಾವುದೇ ಗೊಂದಲಗಳಿಲ್ಲ. ನಾನು ಹೇಳುವ ವಿಚಾರಗಳಲ್ಲಿ ನಾನು ಸ್ಪಷ್ಟತೆ ಹೊಂದಿಯೇ ಇದ್ದೇನೆ. ಕೆಲವೊಮ್ಮೆ ನಮ್ಮ ವಿಚಾರಗಳು ತಪ್ಪಾಗಬಹುದು. ಅವು ಅರ್ಥವಾದಾಗ ಸರಿ ಮಾಡಿಕೊಳ್ಳುವುದಿದ್ದೇ ಇರುತ್ತೆ. ಬುದ್ದರು ಮಾಡಿದರೆ ಕಾರಣವಿತ್ತು, ಸಂಘ ಪರಿವಾರ ಮಾಡಿದರೆ ಅದು ಕುಮ್ಮಕ್ಕು! ಇದು ಇಬ್ಬಂದಿತನವಲ್ಲವೇ ಅಮತ ಕೇಳಿದ್ದೀರಿ. ಇದಕ್ಕೆ ನನ್ನ ಉತ್ತರ ಖಂಡಿತಾ ಅಲ್ಲ. ಯಾಕೆ ಕೇಳಿ. ಬೌದ್ಧ ಧರ್ಮ ಮಾಂಸಾಹಾರ ತ್ಯಜಿಸಿದ್ದು ಚಾರಿತ್ರಿಕ ಕಾರಣಗಳಿಂದ. ಆದರೆ ಒಬ್ಬ ಸಂಘ ಪರಿವಾರದ ವ್ಯಕ್ತಿ ಗೋರಕ್ಷಣೆಯ ಬಗ್ಗೆಯಾಗಲೀ, ಅಹಿಂಸೆಯ ಬಗ್ಗೆಯಾಗಲೀ ಬಡಾಯಿ ಕೊಚ್ಚುತ್ತಾನೆಂದರೆ ಅದರಲ್ಲಿ ಅಪ್ಪಟ ಡೋಮಗೀತನ ಇರುತ್ತದೆ. ನೋಡಿ ಈ ಚರ್ಚೆಯಲ್ಲಿ ಮಾಂಸಾಹಾರದ ವಿರುದ್ಧವಾಗಿ ಪ್ರತಿಪಾದಿಸಿದಂತಹ ಅಪೂರ್ವ ಅಂತಹವರೂ ಇದ್ದಾರೆ. ಅವರ ಪ್ರಾಮಾಣಿಕತೆ ಬಗ್ಗೆ ನನಗೆ ಗೌರವವಿದೆ. ಹೀಗಾಗಿ ಅವರ ವಿಚಾರವನ್ನೂ ಗೌರವಿಸುತ್ತೇನೆ. ಆದರೆ ಧರ್ಮದ ಹೆಸರಿನಲ್ಲಿ ಹಿಂಸೆಯನ್ನು ಪ್ರತಿಪಾದಿಸುವ ಒಬ್ಬ ಸಂಘಪರಿವಾರದ ವಕ್ತಿಗೆ ಮಾಂಸಾಹಾರವನ್ನು ಪ್ರಾಣಿ ಹಿಂಸೆ, ಅಹಿಂಸೆಗಳ ನೆಲೆಯಲ್ಲಿ ವಿರೋಧಿಸುವ ನೈತಿಕ ಹಕ್ಕಿರುವುದಿಲ್ಲ. ಹೀಗಾಗಿ ಅದು ಕುಮ್ಮಕ್ಕೇ ವಿನಃ ಪ್ರಾಮಾಣಿಕ ಕಾಳಜಿಯಲ್ಲ. ಕೊನೆಯದಾಗಿ, ನಾನು ’ಬುದ್ದಿಜೀವಿ’ಯಾಗಲು ಪ್ರಯತ್ನಿಸುತ್ತಿದ್ದೇನೆಂದು ಸುಖಾಸುಮ್ನೆ ಗಂಭೀರವಾದ ಆಪಾದನೆ ಮಾಡಿದ್ದೀರಿ. ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ತಯಾರಾಗಿದ್ದೇನೆ. ನಿಮ್ಮ ಹೆಸರು, ಊರು ತಿಳಿಸಿ. -- Regards, Harsha Kugwe

ನನ್ನ ಮಾರುತ್ತರ:

~rAGU said...
@ಹರ್ಷ ಅವರೆ ವಿಷಯವನ್ನು ವಸ್ತುನಿಷ್ಟವಾಗಿ ಚರ್ಚಿಸದೇ ಘಾಸಿಗೊ೦ಡವರ೦ತೆ ಪ್ರತಿಕ್ರಿಯಿಸಿದ್ದೀರಿ. ಘಾಸಿಗೊಳ್ಳುವುದು ಸತ್ಯಕೇಳಿ ಬೆಚ್ಚಿಬೀಳುವವರ ಲಕ್ಷಣ ಎ೦ದು ಯಾರೋ ಹೇಳಿದ ನೆನಪು. ಇರಲಿ, ನಿಮ್ಮ ಮೂಲ ವಾದದಬಗ್ಗೆ ನನಗೆ ವಿಶೇಷ ಆಸಕ್ತಿ ಇಲ್ಲ, ನಾನು ಅದೇ ವಾತಾವರಣದಲ್ಲಿ ಬೆಳೆದಿದ್ದೇನೆ. ಆದರೆ ನಿಮ್ಮ ಗೋಜಲು ಮನಸ್ಥಿತಿಯಬಗ್ಗೆ ಅಸಮಾಧಾನ ಅಷ್ಟೆ. ೧) ಸ೦ಶೋಧನೆ ಬಹಳ ದೂರದಮಾತು. ಶೋಧನೆ ನಮಗೆ ನಿಮಗೆ ಸಧ್ಯ ಸಾಕು. ಈ ವೀಡಿಯೋ ನೋಡಿ: http://www.youtube.com/watch?v=r9quEOYqsuI ಕಾಗೋಡು ತಿಮ್ಮಪ್ಪನವರು, ಪಾಪ, ಇನ್ನೇನು ಎದುರಿಗಿದ್ದವರನ್ನು ಹೊಡೆದೇಬಿಡುವಷ್ಟು ಬ್ರಾಹ್ಮಣದ್ವೇಷ ಕಕ್ಕಿಕೊಳ್ಳುತಿದ್ದಾರೆ. ಮಾಲ್ವೆ ಊರಿನ ಹೆಸರು ಕೇಳಿದ್ದೀರೋ? ಬಲ್ಲವರಲ್ಲಿ ಕೇಳಿ ನಿಮಗೆ ಕಥೆಹೇಳಿಯಾರು. ಹಲವು ಉದಾಹರಣೆ ಸಮರ್ಥನೆ ಕೊಡಬಹುದು ಆದರೆ ನನಗೆ ನಿಮ್ಮೆದುರು ಅದನ್ನು ಸಮರ್ಥಿಸಿಕೊಳ್ಳುವ ಅವಶ್ಯಕತೆ ಕಾಣುವುದಿಲ್ಲ. ೨) ಕೋಸಾ೦ಬಿ ಒಬ್ಬ ಮಾರ್ಕ್ಸಿಸ್ಟ್ ಇತಿಹಾಸಕಾರರು ಎನ್ನುವುದು ಜನಜನಿತವಾದದ್ದು. ಕನಿಷ್ಟ ವೀಕಿಪೀಡಿಯಾವನ್ನಾದರು ಓದಿ. ಅವರು ಸ೦ಪೂರ್ಣ ಬಲಪ೦ಥೀಯವಾದದ ವಿರೋಧಿ! ಈ ಎಡಪ೦ಥೀಯ ಮಾರ್ಕ್ಸಿಸ್ಟರು ಮಾಡಿಟ್ಟ ಅದ್ವಾನವನ್ನು ಬಗೆಹರಿಸಲು ಇನ್ನೂ ಶತಮಾನಗಳೇ ಬೇಕು. ನಿಮಗೆ ಪ್ರಾಮಾಣಿಕವಾಗಿ ಅದರಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಅನೇಕ ಅವಕಾಶವಿದೆ. ೩) ಶ೦ಕರಾಚಾರ್ಯರ ಹೆಸರು ಕೇಳಿದ್ದೀರೋ ? ಸಸ್ಯಾಹಾರಕ್ಕೂ ಕೆಲವು ಸಮುದಾಯಗಳಿಗೂ ಇರುವ ಸ೦ಬ೦ಧಕ್ಕೂ ಚಾರಿತ್ರಿಕ ಹಿನ್ನೆಲೆ ಇದೆ. ಸ೦ಶೋಧನೆ ಬೇಡ, ಸ್ವಲ್ಪ ಶೋಧನೆ ಮಾಡಿ! ೪) ನೀವು ನಿಮ್ಮ ಪ್ರತಿಕ್ರಿಯೆಗಳಲ್ಲೂ ಲೇಖನದಲ್ಲೂ ಅನಗತ್ಯವಾಗಿ ನಿಮ್ಮ ಸಸ್ಯಾಹಾರಿ ವಿರೋಧೀ ಮತ್ತು ಬಲಪ೦ಥೀಯ ವಿರೋಧೀ ಭಾವೆನೆಗಳನ್ನು ಸ್ಪಷ್ಟವಾಗಿ ತೋರ್ಪಡಿಸಿದ್ದೀರಿ. ಅಲ್ಲದೇ ಹ೦ಗಿಸಿ ನುಡಿದಿದ್ದೀರಿ. ಅವನ್ನಾಧರಿಸಿ ನಿಮ್ಮ ಒಲವಿನ ಬಗ್ಗೆ ಊಹೆಮಾಡಬಹುದು. ಇದಕ್ಕೆ ಅಸಹನೆ ಎ೦ಬ ಪದಬಳಸುತ್ತಾರೆ (intolerance). ಎಲ್ಲವನ್ನೂ ಒಪ್ಪದಿರುವ ಸ್ವಾತ೦ತ್ರ್ಯ ಹಕ್ಕು ನಮಗಿದ್ದರೂ ಬೇರೆ ಸಮುದಾಯದ ಮೌಲ್ಯಗಳನ್ನು ಹ೦ಗಿಸುವ ಅಧಿಕಾರ ಯಾರಿಗೂ ಇಲ್ಲ. ನಮ್ಮಿಬ್ಬರ ಸ೦ಭಾಷಣೆಯ ಧಾಟಿಯಬಗ್ಗೆ ನನಗೇನು ಸಮಾಧಾನವಿಲ್ಲ. ಏಕೆ೦ದರೆ ನಾನೂ ಬ್ರಾಹ್ಮಣ, ಈಡಿಗ, ವಕ್ಕಲಿಗ, ಮಡಿವಾಳ, ಹೊಲೆಯ, ಮಾದಿಗಾದಿಗಳೊಡನೆ ಆಡಿ ಬೆಳೆದವನೆ. ಇವತ್ತಿಗೂ ಊರಿಗೆ ಹೋದಾಗ ಸ್ನೇಹಿತರು ಮನೆಯಲಿಲ್ಲದಿದ್ದರೂ ಅವರಗದ್ದೆಗೆ ಹೋಗಿ ಅಪ್ಪಿಮಾತಾಡಿಸುವಷ್ಟು ಬಳಕೆ ಇದೆ. ಆದರೆ, ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎನ್ನುವಮೂಲಕ ಸ್ವಲ್ಪ ಅತಿಮಾಡಿದ್ದೀರಿ. ನನ್ನ ಜಾತಕವೇ ಅ೦ತರ್ಜಾಲದಲ್ಲಿದೆ. ನಿಮ್ಮ೦ತೆ ನನ್ನ ಹೆಸರಿನಲ್ಲೂ ನನ್ನ ಊರಿದೆ! ಸಿಕ್ಕದಿದ್ದರೆ ಇನ್ನೊಮ್ಮೆ ಕೇಳಿ, ದಾರಾಳವಾಗಿ ಕೊಡುತ್ತೇನೆ. ಗೊಡ್ಡು ಬೆದರಿಕೆಹಾಕುವುದು ಪ್ರಾಮಾಣಿಕವಾಗಿ ಚರ್ಚಿಸುವವರ ಲಕ್ಷಣ ಅಲ್ಲ. ಅದಕ್ಕೆ ಹೆದರುವನಾಗಿದ್ದರೆ ಈ ರೀತಿ ಪ್ರತಿಕ್ರಿಯಿಸುತ್ತಲೂ ಇರಲಿಲ್ಲ. ನಮ್ಮನಿಮ್ಮ೦ಥವರು ವಿನಾಕಾರಣ ನಮ್ಮ ಶಕ್ತಿಯನ್ನು ಅನುಪಯೋಗೀ ಕಾರ್ಯಗಳಲ್ಲಿ ವಿನಿಯೋಗಿಸಬಾರದು ಎ೦ದು ಬಲ್ಲವರು ಹೇಳಿದ್ದಾರೆ. ನಮಸ್ಕಾರ. ರಾಗು ಕಟ್ಟಿನಕೆರೆ

ಹರ್ಷ ಅವರ ಮಾರುತ್ತರ:
@ರಾಘು ಅವರೆ, ನೀವು ಹೇಳಿದ ಮೊದಲೆರಡು ಸಾಲುಗಳು ನಿಮ್ಮ ಈ ಹಿಂದಿನ ಪ್ರತಿಕ್ರೆಯೆಯ ವಿಷಯದಲ್ಲೂ ಅಷ್ಟೇ ಸತ್ಯ. ಅಲ್ಲವೇ? ಚರ್ಚೆಯ ದಾಟಿಯ ಬಗ್ಗೆ ನೀವು ಆಗಲೇ ಯೋಚಿಸಿದ್ದರೆ ಇದು ಹೀಗಾಗುತ್ತಿರಲಿಲ್ಲ ಬಿಡಿ. ನನ್ನನ್ನು ಗೋಜಲು ಮನಸ್ಥಿತಿಯಿಂದ ಹೊರತರಲು ಅವಿರತ ಪ್ರಯತ್ನಕ್ಕೆ ಹೇಗೆ ಕೃತಜ್ಞತೆ ಹೇಳಬೇಕೋ ತಿಳಿಯುತ್ತಿಲ್ಲ. ೧. ನಿಮ್ಮ ಶೋಧನೆಯ ಯೂಟ್ಯೂಬ್ ಲಿಂಕ್‌ನ್ನು ನಿಧಾನಕ್ಕೆ ನೋಡುತ್ತೇನೆ. ಆದರೆ ತಮ್ಮ ಸ್ವಂತ ಏಳಿಗೆಗಾಗಿ ಜಾತಿಯನ್ನು ಬಳಸಿಕೊಳ್ಳುವ ರಾಜಕಾರಣಿಗಳ ಮಾತುಗಳಿಗೆ ನಾನು ಅಷ್ಟಾಗಿ ಬೆಲೆ ಕೊಡಬಾರದು ಎಂದುಕೊಂಡಿದ್ದೇನೆ. ಬ್ರಾಹ್ಮಣ ದ್ವೇಷದ ಉದಾಹರಣೆಗಳು ನಿಮಗೆ ಸಿಕ್ಕಿರಬಹುದು. ಆದರೆ ನನ್ನ ದೃಷ್ಟಿಯಲ್ಲಿರುವುದು ಎಂದೂ ಬ್ರಾಹ್ಮಣ - ದೀವರಲ್ಲಿ ಜಗಳ ದೊಂಬಿಯಾಗಲೀ ದ್ವೇಷವಾಗಲೀ ಇರದ ನಮ್ಮ ಊರು ಹಾಗೂ ಅಂತಹ ಅನೇಕ ಊರುಗಳು. ನೀವು ಹೇಳಿರುವುದು ನಿಜ ಸಂಗತಿಯಾದರೆ ಅದು ಕಾಳಜಿಯ ವಿಷಯ. ಜಾತಿ - ಜಾತಿಗಳ ಹಾಗೂ ಧರ್ಮ - ಧರ್ಮಗಳ ನಡುವೆ ಅದು ಯಾವುದೇ ಕಾರಣಕ್ಕಿರಲಿ ದ್ವೇಷ, ಕಲಹ, ಸಂಘರ್ಷಗಳೇರ್ಪಡುವುದು ಈ ಬಹುಸಂಸ್ಕೃತೀಯ ಭಾರತದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಏನಂತೀರಿ?. ಅಭಿಪ್ರಾಯ ಬೇಧಗಳು ಮಾತುಕತೆಯಿಂದ ಬಗೆಹರಿಯಬೇಕು. ೨. ನಿಮ್ಮ ಸಲಹೆಯಂತೆ ಕೊಸಾಂಬಿ ಬಗ್ಗೆ ತಿಳಿಯಲು ವಿಕಿಪಿಡಿಯಾ ನೋಡಿದೆ. ಅದರಲ್ಲಿ ಹೀಗಿತ್ತು. He is well-known for his work in numismatics and for compiling critical editions of ancient Sanskrit texts. His father, Dharmananda Damodar Kosambi, had studied ancient Indian texts with a particular emphasis on Buddhism and its literature in the Pali language. Damodar Kosambi emulated him by developing a keen interest in his country's ancient history. Kosambi was also a Marxist[1] historian specializing in ancient India who employed the historical materialist approach in his work. He is described as "the patriarch of the Marxist school of Indian historiography".[1]....... ನೀವು ಹೇಳಿದ್ದು ಸರಿ ರಾಘು. ಅವರು ಮಾರ್ಕ್ಸ್‌ವಾದಿ ಕೂಡಾ ಹೌದಂತೆ!. ಆದರೆ ಏನು ಮಾಡೋಣ. ನನಗೆ ಪ್ರಾಚೀನ ಭಾರತದ ಬಗ್ಗೆ ಕೋಸಾಂಬಿ ಹೇಳಿರುವುದು ಅತ್ಯಂತ ವೈಜ್ಞಾನಿಕವಾಗಿ ಕಂಡಿದೆ. ಯಾರಾದರೂ ಬಲಪಂಥೀಯ ಬರೆದಿದ್ದು ಅಷ್ಟೇ ವೈಜ್ಞಾನಿಕವಾಗಿ ಕಂಡರೆ ನಾನು ಮರುಮಾತಿಲ್ಲದೇ ಒಪ್ಪಿಕೊಳ್ಳುತ್ತೇನೆ. ಸರೀನಾ?. ಕಮ್ಯುನಿಷ್ಟರ ಬಗ್ಗೆ ನಿಮಗೆ ಏನಿದೆಯೋ ಗೊತ್ತಿಲ್ಲ. ನನಗೂ ಸಾವಿರ ಭಿನ್ನಾಭಿಪ್ರಾಯಗಳಿವೆ. ಅದಕ್ಕಿಂತಲೂ ಹೆಚ್ಚು ಬಲಪಂಥೀಯರ ಬಗ್ಗೆ ಇವೆ. ಇವುಗಳ ಬಗ್ಗೆ ಚರ್ಚಿಸಲು ಬೇರೆ ವೇದಿಕೆ ಕಲ್ಪಿಸಲು ಸಂಪಾದಕೀಯದವರನ್ನೇ ಕೇಳೋಣ. ಇದು ವೇದಿಕೆಯಲ್ಲ. ಓಕೆನಾ? ೩. ಡಾ. ಬಿ.ಆರ್.ಅಂಬೇಡ್ಕರ್ ಹೆಸರು ಕೇಳಿದೀರೋ?. ಮಾಂಸಾಹಾರಕ್ಕೂ ಕೆಲವು ಸಮುದಾಯಕ್ಕೂ (ವಿಶೇಷವಾಗಿ ಗೋ ಮಾಂಸಕ್ಕೂ) ಇರುವ ಸಂಬಂಧಕ್ಕೂ ಚಾರಿತ್ರಿಕ ಹಿನ್ನೆಲೆ ಇದೆ. ಸಂಶೋಧನೆ ಬೇಡ. ಶೋಧನೆ ಮಾಡಿ. ಲಿಂಕನ್ನೂ ನಾನೇ ಕೊಡುತ್ತೇನೆ. ನೋಡಿ.1. http://www.ambedkar.org/ambcd/39B.Untouchables%20who%20were%20they_why%20they%20became%20PART%20II.htm ೪. ನೋಡಿ. ನಿಮ್ಮ ಮಾತನ್ನು ಅಕ್ಷರಶಃ ಒಪ್ಪುತ್ತೇನೆ. ಬೇರೆ ಸಮುದಾಯದ ಮೌಲ್ಯಗಳನ್ನು ಹಂಗಿಸುವ ಅಧಿಕಾರ ಯಾರಿಗೂ ಇಲ್ಲ. ಈ ದೇಶದಲ್ಲಿ ಮಾಂಸಾಹಾರ ಕೂಡಾ ಒಂದು ಸಂಸ್ಕೃತಿ, ಒಂದು ಮೌಲ್ಯ. ಅದರ ಬಗ್ಗೆ ಅಭಿಪ್ರಾಯಬೇಧ ಮಾತ್ರ ಸಾಧ್ಯ. ಹಂಗಿಸುವ, ಮಾಂಸಾಹಾರ ಮಾಡುವವರನ್ನು ಕೀಳಾಗಿ ನೋಡುವ ಹಕ್ಕು ಯಾರಿಗೂ ಇಲ್ಲ. ಇದು ಶತಃಸಿದ್ಧ. ಸಂಘಪರಿವಾರದ ಅಪ್ರಾಮಾಣಿಕತೆ, ಮಾಂಸಾಹಾರದ ವಿಚಾರದಲ್ಲಿ ಡೋಂಗಿತನವನ್ನು ಪ್ರಶ್ನಿಸಿದ ಮಾತ್ರಕ್ಕೆ ಕಸಿವಿಸಿಗೊಂಡ ನಿಮ್ಮ ಒಲವೂ ಅರ್ಥವಾಗಿದೆ. ನೀವೇನೂ ಸಹನೆಯಿಂದ ಪ್ರತಿಕ್ರಿಯಿಸಲಿಲ್ಲವಲ್ಲ. ನಿಮ್ಮ ಹಿನ್ನೆಲೆ ಹೇಳಿದ್ದೀರಿ ಸಂತೋಷ. ನನ್ನ ಗೊಡ್ಡುಬೆದರಿಕೆ ವರ್ಕೌಟ್ ಆಗಿದೆ. ಡೋಂಟ್ ವರಿ. ನನ್ನ ಮನಸ್ಸು ಬದಲಾಯಿಸಿದ್ದೇನೆ. ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆಯಿಲ್ಲ!. be happpy.. -ಹರ್ಷ ಕುಗ್ವೆ.


ನ೦ತರ ಮತ್ತೆ ಕಾಮೆ೦ಟ್ ಬ್ಲಾಕ್! ಸ೦ಪಾದಕೀಯದ ಬಣ್ಣ ನಿಮಗೆ ಈಗ ಗೊತ್ತಾಗಿರಬಹುದೆ೦ದು ಕೊಡಿದ್ದೇನೆ.
ಹೀಗಾಗಿ ನನ್ನ ಪ್ರತಿಕ್ರಿಯೆ ಇಲ್ಲಿ ಪ್ರಕಟಿಸಿದ್ದೇನೆ.
ಹರ್ಷಾವ್ರೆ,
"ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ತಯಾರಾಗಿದ್ದೇನೆ. ನಿಮ್ಮ ಹೆಸರು, ಊರು ತಿಳಿಸಿ", ಎ೦ದ ನಿಮಗೆ ಮೊಕದ್ದಮೆ ಹಾಕಲು ಅನುಕೂಲವಾಗಲಿ ಎ೦ದೇ ಊರು ತಿಳಿಸಿದ್ದು. ಅದೇನು ವರ್ಕೌಟ್ ಆಯಿತೋ ನಿಮಗೇ ಅರ್ಥವಾಗಬೇಕು. ನಿಮ್ಮ ಗೊಡ್ಡುಬೆದರಿಕೆಗೆ ಹೆದರಿದ್ದರೆ ಮೊಕದ್ದಮೆಹೂಡಲು ನನ್ನ ಹೆಸರು, ಊರು ನಿಮಗೆ ಕೊಡುತ್ತಿರಲಿಲ್ಲ. ಕಾನೂನು ಪತ್ರಕರ್ತರ ಕೂಲಿಯಾಳಲ್ಲ. ದಯವಿಟ್ಟು ನನ್ನ ಮೇಲೆ ಮಾನನಷ್ಟ ಮೊಕದ್ದಮೆಹೂಡಿ! ಇನ್ನೂ ನಿಮಗೇನು ವಿವರಬೇಕು ಕೇಳಿ, ದಯಪಾಲಿಸುತ್ತೇನೆ. ನೀವು ನನಗೆ ಕೃತಜ್ಞತೆ ಹೇಳಬೇಕಾದ್ದೇ! ನಿಮ್ಮ ಉತ್ತರದಲ್ಲಿ ನಾನು ಹೇಳುವುದು ಅರ್ಥವಾಗಿ ಎಲ್ಲವನ್ನೂ ಒಪ್ಪಿದ್ದನ್ನು ನೋಡಿದರೆ, ನನ್ನ ಪ್ರಯತ್ನ ಫಲಿಸಿ ಸ್ವಲ್ಪ ನಿಮ್ಮ ಬುದ್ದಿಬಲಿದ೦ತೆಕಾಣಿಸುತ್ತಿದೆ! 

೧) ಸ್ವಲ್ಪ ಮೆತ್ತಗಾಗಿದ್ದೀರಿ! ಸ೦ತೋssಷ. ಇನ್ನೂ ಹೀಗೆ ಶೋಧನೆ ಮಾಡಿ ನಿಮಗೆ ಒ೦ದು ದಿನ ಅರ್ಥವಾಗಬಹುದು. ಬ್ರಾಹ್ಮಣದ್ವೇಷೀ ರಾಜಕಾರಣಿಗಳನ್ನು ಒಪ್ಪಿ ಮತ ಹಾಕುವವರು ಇಲ್ಲದಿದ್ದರೆ ರಾಜಕಾರಣಿಗಳು ಆವಿಷಯ ತರವಷ್ಟು ಹೆಡ್ಡರಲ್ಲ ? ಎಲ್ಲರೂ ಹಾಗಲ್ಲ ಆದರೆ ಸಾಕಾಗುವಷ್ಟು ದ್ವೇಷಿಗಳಿದ್ದಾರೆ. ನಮ್ಮೂರಲ್ಲಿ ಇಲ್ಲ ಎ೦ದರೆ ಬೆಕ್ಕು ಕಣ್ಮುಚ್ಚಿ ಹಾಲು ಕುಡಿದ೦ತಾಯಿತು.

೨) ಆಗ ಒಪ್ಪದವರು ಈಗ ನನ್ನ ಮಾತಿಗೆ ಮಾರ್ಕ್ಸ್ಸಿಟ್ಟರು ಹೌದು ಎ೦ದು ಒಪ್ಪಿದ್ದೀರಿ. ಬಲುಸ೦ತೋsಷವಾಯಿತು! ಹೀಗೆ ಬೇರೆಯವರು ಹೇಳಿ ಒಪ್ಪಿಸುವವರೆಗೆ ಕಾಯದೇ ನೀವೇ ಹುಡುಕಿಕೊಳ್ಳುವ ಶಕ್ತಿ ನಿಮಗೆ ಬರಲಿ ಎ೦ದು ಮಾರ್ಯಮ್ಮನಿಗೆ ಒ೦ದು ಕುರಿ ಕಡಿಸಬಹುದೋ ಹೇಗೆ?

ವಿಜ್ಞಾನಕ್ಕೆ ಎಡಬಲವೆ೦ಬ ರಾಜಕೀಯ ಸೈದ್ಧಾ೦ತಿಕ ಒಲವಿಲ್ಲ. ರಾಜಕೀಯ ಸೈದ್ದಾ೦ತಿಕ ಒಲವಿದ್ದರೆ ಅದು ವೈಜ್ಞಾನಿಕವಲ್ಲ. ಎಡಪ೦ಥೀಯ ವಿಜ್ಞಾನಿಗಳು ಎ೦ಬಮಾತನ್ನು ಎಲ್ಲಿಯಾದರೂ ಕೇಳಿದ್ದೀರೋ ? ಎಡಪ೦ಥೀಯ ಇತಿಹಾಸಕಾರ ಎ೦ದಾಕ್ಷಣ ಅವರ ಒಲವು ಯಾವಕಡೆ ಎ೦ದು ನಿಮಗೆ ಅರ್ಥವಾಗಬೇಕಿತ್ತು. ಗ೦ಭೀರ ಅಧ್ಯಯನಮಾಡುವವರು, ಇತಿಹಾಸ ಬರೆಯುವವರು ರಾಜಕೀಯ ಒಲವುಗಳಿ೦ದ ಪ್ರೇರಿತರಾದರೆ ವಸ್ತುನಿಷ್ಟತೆ ಕಳೆದು ಹೋಗುತ್ತದೆ. ಸಮಸ್ಯೆ ಏನೆ೦ದರೆ, ಪೆನ್ನು ಸಿಕ್ಕಿದ್ದಕ್ಕೆ ಪ್ರಪ೦ಚವೆಲ್ಲಾ ನಮಗೇ ಗೊತ್ತೆ೦ಬ ಅಹ೦ಕಾರ ಕೆಲವು ಪತ್ರಕರ್ತರಿಗೆ. ಅವರ ಗು೦ಪಿಗೆ ಸೇರಬೇಡಿ.

೩) ಅ೦ಬೇಡ್ಕರರ ಬಗ್ಗೆ ನಾನು ಕೇಳಿದ್ದೇನೋ ಇಲ್ಲವೋ ಇಲ್ಲಿ ಅಪ್ರಸ್ತುತ. ಬೌದ್ಧರ ಸಸ್ಯಾಹಾರಕ್ಕೆ ಮಾತ್ರ ಚಾರಿತ್ರಿಕ ಹಿನ್ನೆಲೆ ಇದೆ ಬೇರೆಲ್ಲ ಡೋ೦ಗಿ ಎ೦ದ ನಿಮಗೆ, ಚಾರಿತ್ರಿಕ ಹಿನ್ನೆಲೆ ಇದೆ ಎ೦ಬುದಕ್ಕೆ ಉದಾಹರಣೆ ಕೊಡಲು ಶ೦ಕರಾಚಾರ್ಯರ ವಿಷಯ ಪ್ರಸ್ತಾಪ ಮಾಡಿದೆ (ನಿಮ್ಮ ಗಮನಕ್ಕೆ, ಅ೦ಬೇಡ್ಕರರ ಇದೇ ಧಾಟಿಯಹಲವು ಬರಹಗಳನ್ನು ಮತ್ತೂ ಅನೇಕ ದಲಿತ ಮೂಲಭೂತವಾದದ ಬೇರೆಯವರ ಬರಹಗಳನ್ನು ಓದಿದ್ದೇನೆ.). ಇರಲಿ, ನಿಮ್ಮ ಅನಿಸಿಕೆ ತಪ್ಪೆನ್ನುವ ಬರಹಗಳನ್ನೂ ಓದಿ. ಅದಕ್ಕೇ ವಸ್ತುನಿಷ್ಟತೆ ಎನ್ನುವುದು. ನಿಮ್ಮವಾದವನ್ನೇ ಸಮರ್ಥಿಸುವ ವಿಚಾರವನ್ನೇ ಓದುವುದು ಪ್ರಾಮಾಣಿಕವಾಗಿ ವಿಷಯವನ್ನು ಎಲ್ಲಾ ದೃಷ್ಟಿಯಿ೦ದ ನೋಡುವವರ ಲಕ್ಷಣವಲ್ಲ. ನಿಮಗೆ ಆದಿಕ್ಕಿನಲ್ಲಿ ಉಪಕಾರಮಾಡಲೆ೦ದೇ ನಿಮಗೆ ಕ್ಲೂ ಕೊಟ್ಟಿದ್ದೆ. ಓದಿ. ಇರುವಚಾರಿತ್ರಿಕ ಹಿನ್ನೆಲೆಯನ್ನು ತಿಳಿದಿಕೊಳ್ಳುವ ವ್ಯವಧಾನ ನಿಮಗಿಲ್ಲದೇ ಇದ್ದರೆ ಯಾರೇನುಮಾಡಲು
ಸಾಧ್ಯ?

"ಇವುಗಳ ಬಗ್ಗೆ ಚರ್ಚಿಸಲು ಬೇರೆ ವೇದಿಕೆ ಕಲ್ಪಿಸಲು ಸಂಪಾದಕೀಯದವರನ್ನೇ ಕೇಳೋಣ. ಇದು ವೇದಿಕೆಯಲ್ಲ. ಓಕೆನಾ?" ಎ೦ದಿದ್ದೀರಿ. ಬೇರೆ ವೇದಿಕೆಗೆ ಅಡ್ಡಿಯಿಲ್ಲ ಆದರೆ ನೀವು ಹೇಳಿದ್ದನ್ನ ಒಪ್ಪದಿದ್ದರೆ ಇದು ವೇದಿಕೆಯಲ್ಲ ಎ೦ದರೆ ಸ್ವಲ್ಪ ಸಮಸ್ಯೆ! ತೀವ್ರವಾಗಿ ಟೀಕಿಸಲ್ಪಟ್ಟ ಇತಿಹಾಸಕಾರರ ಹೆಸರನ್ನು ಎಳೆದದ್ದು ನಿಮ್ಮ ಬರಹ, ನನ್ನದಲ್ಲ. ಅದಕ್ಕೆ ನಿಮ್ಮ ಬರಹವನ್ನು ಕಟುವಾಗಿ ಟೀಕಿಸಲ್ಪಟ್ಟಿದೆ.

೪) ಮತ್ತೆ ಒಪ್ಪಿದ್ದೀರಿ. ಒಳೆಯ ಬೆಳವಣಿಗೆ. ಮೇಲ್ನೋಟಕ್ಕೆ ನನ್ನ ನಿಮ್ಮ ಅಭಿಪ್ರಾಯಗಳಲ್ಲಿ ವ್ಯತ್ಯಾಸವೇ ಇಲ್ಲ! ಆದರೆ ಈಗ ಒಪ್ಪುವ ನೀವು ನಿಮ್ಮ ಬರಹದಲ್ಲಿ ಮಾತ್ರ ತದ್ವಿರಿದ್ಧವಾಗಿ ಬೇರೆ ಸಮುದಾಯಗಳನ್ನು ಅವಹೇಳನಮಾಡಿದ್ದೀರಿ. ಸ್ವಲ್ಪ ತಡವಾದರೂ ಅರ್ಥವಾಗಿದೆಯಲ್ಲ, ನನ್ನ ಪ್ರತಿಕ್ರಿಯೆ ವರ್ಕೌಟ್ ಆಯಿತು!

ಸ೦ಘಪರಿವಾರದ ನೆಪದಲ್ಲಿ ಸಸ್ಯಾಹಾರಿವರ್ಗಗಳನ್ನೂ ಸೇರಿಸಿ ಡೋ೦ಗಿತನದ ಗ೦ಭೀರ ಅಪವಾದಮಾಡಿದ್ದೀರಿ! ಅದಕ್ಕೆ ಅವರೇ ಪ್ರತಿಕ್ರಿಯಿಸಬೇಕು. ವಿಶೇಷವಾಗಿ ಸೂಡೋಸೆಕ್ಯುಲರ್ ಗಳ ವಾದ ಸರಣಿಯನ್ನೂ ಮ೦ಡಿಸಿದ್ದೀರಿ (guilt by association fallacy). ಬ್ರಾಹ್ಮಣರು ಮಾ೦ಸಾಹಾರಿಗಳಾಗಿದ್ದರು ಎನ್ನುವುದಕ್ಕೆ ಪುರಾವೆ ಒದಗಿಸುವ ಪ್ರಯತ್ನವನ್ನೂ ಮಾಡಿದ್ದೀರಿ. ಅದು ಒ೦ದೊಮ್ಮೆ ನಿಜವಾದರೂ ನಿಮ್ಮ ದ್ವೇಷಸಾಧನೆಗೆ ಅದುಸಮರ್ಥನೆಯ೦ತೂ ಆಗದು.  ಆದರೆ ನಾನು ಪ್ರತಿಕ್ರಿಯಿಸಿದ್ದು ಸ೦ಬ೦ಧವಿಲ್ಲದೇ ಬಡಬಡಿಸಿದ ನಿಮ್ಮಮೇಲೆ ಕರುಣೆ ಉಕ್ಕಿಬ೦ದಲ್ಲ. ಇಲ್ಲಿನ ಓದುಗರಿಗೆ ನಿಮ್ಮ ಲೇಖನದ ವ್ಯರ್ಥ ಪ್ರಲಾಪ ಮತ್ತು ರಾಜಕೀಯ ಧೋರಣೆ ಸ್ಪಷ್ಟವಾಗಲಿ ಎ೦ದು.

ಮಾ೦ಸಾಹಾರ ಬೇರೆ, ಪ್ರಾಣಿಬಲಿ ಬೇರೆ. ಯಾವ ಹಿನ್ನೆಲೆ ಇಲ್ಲದ ಶುದ್ಧಸಸ್ಯಾಹಾರಿಗಳು ಪಾಶ್ಚಿಮಾತ್ಯದೇಶಗಳಲ್ಲಿದ್ದಾರೆ. ನೀವು ಕ೦ಡ ಚಾರಿತ್ರಿಕ ಹಿನ್ನೆಲೆಗಷ್ಟು ಕಲ್ಲುಬಿತ್ತು, ಹೆಚ್ಚಿನ ಬೌಧ್ಧರು ಮಾ೦ಸಾಹಾರಿಗಳು! ಬೇಕಾದಷ್ಟು ಬೌಧ್ಧ ಭಿಕ್ಷುಗಳೇ ಮಾ೦ಸತಿನ್ನುತ್ತಾರೆ. ಟಿಬೆಟ್ ಚೀನಾ ಜಪಾನ್ ಮತ್ತು ನಮ್ಮಲ್ಲೇ ಭಾರತದಲ್ಲಿ ಈಶಾನ್ಯ ರಾಜ್ಯಗಳಲ್ಲಿ (northeast) ಬಹಳ ಬೌಧ್ಧರು ಮಾ೦ಸತಿನ್ನುವವರೆ. ಅದು ಅವರವರ ಇಷ್ಟ. ಇವುಗಳನಡುವೆ ಗೋಜಲುಮಾಡಿಕೊಳ್ಳುವ ಅವಶ್ಯಕತೆ ಇರಲಿಲ್ಲ. 

ಪ್ರಾಣಿಬಲಿ ಸಹಜವೋ ಅಲ್ಲವೋ ಅಷ್ಟು ನೇರವಾಗಿ ಹೇಳಲು ಬರುವ೦ತಿದ್ದರೆ ಚರ್ಚೆಯ ಅವಶ್ಯಕತೆಯೇ ಇರುತ್ತಿರಲಿಲ್ಲ. ನೀವು ಸರಿ, ಸಹಜ ಎ೦ದಿದ್ದೀರಿ. ನಿಮ್ಮ ಅಭಿಪ್ರಾಯ ಅಥವಾ ಒಲವು ತಿಳಿಸುವುದಕ್ಕೆ ಯಾವ ಅಡ್ಡಿಯೂ ಇಲ್ಲ. ಹಳ್ಳಿಯ ಪ್ರಾಣಿಬಲಿಯಬಗ್ಗೆ ಹಿನ್ನೆಲೆ ಗೊತ್ತಿಲ್ಲದವರನ್ನು ಇದು ಆಲೋಚನೆಗೀಡುಮಾಡೀತು. ಒಳ್ಳೆಯದೆ. ಆದರೆ, ಆ ಪ್ರಕ್ರಿಯೆಯಲ್ಲಿ ನೀವು ಅನಗತ್ಯವಾಗಿ ಇದ್ದಬದ್ದವರಮೇಲೆ ಅಪಾದನೆಮಾಡಿದ್ದಲ್ಲದೇ ನಿಮಗೊಪ್ಪದ ರಾಜಕೀಯ ಬಣಗಳನ್ನೋ ನಿಲುವನ್ನೋ ಅನವಶ್ಯಕವಾಗಿ ಪ್ರಸ್ತಾಪಿಸಿ ಹ೦ಗಿಸಿದ್ದೀರಿ. ಈ ರೀತಿ ಬರೆಯುವವರನ್ನು ಟೀಕಿಸದಿದ್ದರೆ ತಾವು ಬರೆದಿದ್ದೇ ವೇದವಾಕ್ಯ ಎನ್ನುವ ಭ್ರಮೆಗೆಬಿದ್ದುಬಿಡುವ ಸಾಧ್ಯತೆಯು೦ಟುನೋಡಿ. ಆದ್ದರಿ೦ದಲೂ ಪ್ರತಿಕ್ರಿಯೆ ವ್ಯಕ್ತಪಡಿಸಬೇಕಾಗಿ ಬ೦ತು.

ನಾನು ಅಗ೦ತುಕನಾಗಿ ಬರೆದವನಲ್ಲ. ನನ್ನ ಬ್ಲಾಗಿನ ಕೊ೦ಡಿ ಉಪಯೋಗಿಸಿಯೇ ಬರೆದವನು. ಆದರೂ ಅಡ್ರೆಸ್ ಇಲ್ಲದೆ ಬರರೆದವನೆ೦ದು ಬಿ೦ಬಿಸುವ ವ್ಯರ್ಥ ಪ್ರಯತ್ನ ಮಾಡಿದ್ದೀರಿ. ಓ ಮರತೇಬಿಟ್ಟಿದ್ದೆ! ಮಾನ ಬಹಳವೇ ನಷ್ಟವಾಗಿರುವ೦ತೆ ಅನ್ನಿಸುತ್ತಿದೆ. ನನ್ನಮೇಲೆ ಮಾನನಷ್ಟ ಮೊಕದ್ದಮೆಹೂಡಲು ಎಲ್ಲಾದರು ಮರೆತು ಬಿಟ್ಟೀರಾ!

ರಾಗು ಕಟ್ಟಿನಕೆರೆ

ಇಲ್ಲಿ ಯಾರು ಬೇಕಾದರೂ ಬ೦ದು ಬೈಯಬಹುದು. ಆದರೆ ನಿಮ್ಮ ಪೋರ್ಣ ಹೆಸರು ನಿಮ್ಮ ಬ್ಲಾಗ್ ಇರಲೇ ಬೇಕು ನೀವು ಕೃತಕ ಬ್ಲಾಗರ್ ಅಲ್ಲವೆ೦ದು ಗೊತ್ತಾಗಲು. ಇಲ್ಲದಿದ್ದರೆ ಮಾತ್ರ ಕಾಮೆ೦ಟ್ ಅಳಿಸಿಹಾಕುತ್ತೇನೆ. 



11 August 2011

Declining economic growth in southern states

My comment to:
http://www.outlookindia.com/article.aspx?277941

The authors are not well informed about the states and try to impose their hypothesis. For instance, "he continued with his practice of extending state patronage to various caste and quasi-religious organisations." Karnataka has a Mujarai Department and all the money from Hindu religious organisations (mostly temples) goes to that department. Now why should there be any shock if a negligible amount is returned to some religious organisations ? I am still shocked that rest of the money is used for activities unrelated to the temples while temples continue to be in shambles.

The authors also forget Ramakrishna Hegde who instituted Lokayukta in the state and made Karnataka an example for successful decentralisation of power by adapting Panchayithi Raj effectively among other things.

One has to remember that so called best leaders in Karnataka mostly belonged to elite or upper section of soceity and valued dignity. Now what we have are village level street fighters. People in the grab of liberalism have called it democratisation! If this is what is democratisation then get ready for the mess. That is what you get out of it. Right without responsibility is not democratisation.

10 August 2011

ಕನ್ನಡಿಗರಾಗಿ! ಕನ್ನಡದ ಮಿ೦ಚ೦ಚೆಗಾಗಿ ಈಕೆಳಗೆ ನೊ೦ದಾಯಿಸಿಕೊಳ್ಳಿ! Subscribe KST eMails


Subscribe to ಕನ್ನಡ ಸ೦ಘ ಟೊರೋ೦ಟೊ/KST mailing list
* indicates required




ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...