23 August 2012

ತಿರುಕನ ನೆನಪು

ತಿರುಕನೋರ್ವ ಊರಮುಂದೆ
ಮುರುಕು ಧರ್ಮಶಾಲೆಯಲ್ಲಿ
ಮಲಗಿರುತ್ತಲಿರಲು ಕನಸ ಕಂಡನಂತೆ
ಪುರದ ರಾಜ ಸತ್ತನವಗೆ
ವರ ಕುಮಾರರಿಲ್ಲದಿರಲು
ಕರಿಯ ಕೈಗೆ ಕುಸುಮಮಾಲೆ ಕೊಟ್ಟುಪುರದೊಳು

ಮುಂದೇನು...........?


ಇದರ ಪೂರ್ಣ ಪಾಠ ಹೀಗಿದೆ. ಇದು ಒಂದು ‘ಭೋಗ ಷಟ್ಪದಿ’ ಛಂದಸ್ಸಿನ ರಚನೆ. ಇದನ್ನು ನೆನಪಿನಿಂದ ಹೇಳಿದವರು ಗಾಯತ್ರಿ ರಘುಪತಿ, ಬೆಂಗಳೂರು.

ತಿರುಕನ ಕನಸು

ತಿರುಕನೋರ್ವನೂರಮುಂದೆ
ಮುರುಕು ಧರ್ಮಶಾಲೆಯಲ್ಲಿ
ಒರಗಿರುತ್ತಲೊಂದು ಕನಸ ಕಂಡನೆಂತೆನೆ|
ಪುರದ ರಾಜ ಸತ್ತನವಗೆ
ವರ ಕುಮಾರರಿಲ್ಲದಿರಲು
ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು||

ನಡೆದು ಯಾರ ಕೊರಳಿನಲ್ಲಿ
ತೊಡರಿಸುವುದೋ ಅವರ ಪಟ್ಟ
ದೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ|
ಒಡನೆ ತನ್ನ ಕೊರಳಿನಲ್ಲಿ
ತೊಡರಿಸಿದನು ಕಂಡು ತಿರುಕ
ಪೊಡವಿಯಾಣ್ಮನೆಂದು ಮನದಿ ಹಿಗ್ಗುತಿರ್ದನು||

ಪಟ್ಟಗಟ್ಟಲವಗೆ ನೃಪರು
ಕೊಟ್ಟರವರ ಕನ್ಯೆಯರನು
ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೆ|
ಬಟ್ಟನಿಗಳ ಕೂಡಿ ನಲವು
ಪುಟ್ಟಿ ಸುಖದೊಳಿರಲವಂಗೆ
ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೆ||

ಧನದ ಮದವ ರಾಜ್ಯ ಮದವ
ವನಿತೆ ಸುತರ ನೋಡಿ ತಿರುಕ
ಧನಿಕನಾಗಿ ಕಾಣುತಿರ್ದ ಕನಸಿನಲ್ಲಿಯೆ|
ಮುನಿದು ನೃಪರ ದಂಡು ಬಂದು
ಮನೆಯ ಮುತ್ತಿದಂತೆ ಆಗೆ
ಕನಸು ಕಾಣುತಿದ್ದನ್ಹೆದರಿ ಕಣ್ಣ ತೆರೆದನು||

ಮೆರೆಯುತಿದ್ದ ಭಾಗ್ಯವೆಲ್ಲ
ಹರಿದು ಹೋಯಿತೆನುತ ತಿರುಕ
ಮರಳಿ ನಾಚಿ ಪೋಗುತಿದ್ದ ಮುನ್ನಿನಂತೆಯೆ|
ಧರೆಯ ಭೋಗವನ್ನು ಮೆಚ್ಚಿ
ಪರವ ಮರೆತು ಕೆಡಲು ಬೇಡ
ಧರೆಯ ಭೋಗ ಕನಸಿನಂತೆ ಕೇಳು ಮಾನವಾ||

4 comments:

  1. ಇದರ ಪೂರ್ಣ ಪಾಠ ಹೀಗಿದೆ. ಇದು ಒಂದು ‘ಭೋಗ ಷಟ್ಪದಿ’ ಛಂದಸ್ಸಿನ ರಚನೆ. ಇದನ್ನು ನೆನಪಿನಿಂದ ಹೇಳಿದವರು ಗಾಯತ್ರಿ ರಘುಪತಿ, ಬೆಂಗಳೂರು.

    ತಿರುಕನ ಕನಸು

    ತಿರುಕನೋರ್ವನೂರಮುಂದೆ
    ಮುರುಕು ಧರ್ಮಶಾಲೆಯಲ್ಲಿ
    ಒರಗಿರುತ್ತಲೊಂದು ಕನಸ ಕಂಡನೆಂತೆನೆ|
    ಪುರದ ರಾಜ ಸತ್ತನವಗೆ
    ವರ ಕುಮಾರರಿಲ್ಲದಿರಲು
    ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು||

    ನಡೆದು ಯಾರ ಕೊರಳಿನಲ್ಲಿ
    ತೊಡರಿಸುವುದೋ ಅವರ ಪಟ್ಟ
    ದೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ|
    ಒಡನೆ ತನ್ನ ಕೊರಳಿನಲ್ಲಿ
    ತೊಡರಿಸಿದನು ಕಂಡು ತಿರುಕ
    ಪೊಡವಿಯಾಣ್ಮನೆಂದು ಮನದಿ ಹಿಗ್ಗುತಿರ್ದನು||

    ಪಟ್ಟಗಟ್ಟಲವಗೆ ನೃಪರು
    ಕೊಟ್ಟರವರ ಕನ್ಯೆಯರನು
    ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೆ|
    ಬಟ್ಟನಿಗಳ ಕೂಡಿ ನಲವು
    ಪುಟ್ಟಿ ಸುಖದೊಳಿರಲವಂಗೆ
    ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೆ||

    ಧನದ ಮದವ ರಾಜ್ಯ ಮದವ
    ವನಿತೆ ಸುತರ ನೋಡಿ ತಿರುಕ
    ಧನಿಕನಾಗಿ ಕಾಣುತಿರ್ದ ಕನಸಿನಲ್ಲಿಯೆ|
    ಮುನಿದು ನೃಪರ ದಂಡು ಬಂದು
    ಮನೆಯ ಮುತ್ತಿದಂತೆ ಆಗೆ
    ಕನಸು ಕಾಣುತಿದ್ದನ್ಹೆದರಿ ಕಣ್ಣ ತೆರೆದನು||

    ಮೆರೆಯುತಿದ್ದ ಭಾಗ್ಯವೆಲ್ಲ
    ಹರಿದು ಹೋಯಿತೆನುತ ತಿರುಕ
    ಮರಳಿ ನಾಚಿ ಪೋಗುತಿದ್ದ ಮುನ್ನಿನಂತೆಯೆ|
    ಧರೆಯ ಭೋಗವನ್ನು ಮೆಚ್ಚಿ
    ಪರವ ಮರೆತು ಕೆಡಲು ಬೇಡ
    ಧರೆಯ ಭೋಗ ಕನಸಿನಂತೆ ಕೇಳು ಮಾನವಾ||






    ReplyDelete
  2. ಧನ್ಯವಾದಗಳು ಕವಿ ಯಾರೆಂದು ಬಲ್ಲಿರಾ?

    ReplyDelete
  3. ಕವಿ: ಮುಪ್ಪಿನ ಷಡಕ್ಷರಿ

    ReplyDelete

Please leave a note about what you think about this write up. Thanks.

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...