28 September 2012

ಕನ್ನಡದಲ್ಲಿ ಗುಣಸಂಧಿ ಇದೆಯೇ?

ಈ ಉದಾಹರಣೆ ಗಮನಿಸಿ:
ಶುಕನೋದಿಂಗುರೆ ಚೆಲ್ವೆ ಕಾಕರವ (ಶುಕನ ಊದಿಂಗೆ
ಉರೆ ಚೆಲುವೆ ಕಾಕರವ - ಗುಣ ಸಂಧಿ)

[ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ|| ||            - 
ಸೋಮೇಶ್ವರ ಶತಕ ]
ಇದು ಶುಕ|ನೂ|ದಿಂಗೆ ಅಲ್ಲವೇ? ಸಂಸ್ಕೃತದ ಗುಣಸಂಧಿಯನ್ನು ಕನ್ನಡದಲ್ಲಿ ಬಳಸಲು ಹೋಗಿ ಊದಿಂಗೆ ತಪ್ಪಿ ಓಂದಿಂಗೆ ಆಂದಂತೆ ಆಗಲಿಲ್ಲವೇ ? ಗುಣಸಂಧಿ ಸಂಸ್ಕೃತಸಂಧಿ. ಅದನ್ನು ಸಂಸ್ಕೃತ ಶಬ್ಧಗಳಿಗೆಮಾತ್ರ ಬಳಸಬೇಕು. ಊದು ಕನ್ನಡ ಪದ ಹಾಗಾಗಿ ಇಲ್ಲಿ ಗುಣಸಂಧಿ ಬಳಸಬಾರದು.  

ಗುಣಸಂಧಿ ಕನ್ನಡದಲ್ಲಿ ಇಲ್ಲ ಎನ್ನುವುದು ನನ್ನ ಅಭಿಪ್ರಾಯ! 

ಮಹಾಕವಿಗಳು ತಪ್ಪೆನ್ನುವ ಮೊದಲು ನಾನೇ ತಪ್ಪು ಎಂದು ಕೊಳ್ಳಬೇಕು. "ಓದಿಂಗೆ" ಶಬ್ಧವನ್ನೇ ಕವಿಬಳಸಿದ್ದು. ಓದು ಎಂದರೆ ಉಲಿಯುವಿಕೆ ಎಂದು ಬಲ್ಲವರೊಬ್ಬರು ತಿಳಿಸಿದ್ದಾರೆ.

No comments:

Post a Comment

Please leave a note about what you think about this write up. Thanks.

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...